ಲಕ್ನೋ: ಉತ್ತರಪ್ರದೇಶದ ಹಳ್ಳಿ ಹಳ್ಳಿಗಳಲ್ಲೂ ವಿದ್ಯುತ್ ಸಂಪರ್ಕವನ್ನು ಅಭಿವೃದ್ಧಿಪಡಿಸುವ ಮಹತ್ವದ ಗುರಿ ಹೊಂದಿರುವ ಯೋಗಿ ಆದಿತ್ಯನಾಥ ಸರ್ಕಾರ, 100 ದಿನದೊಳಗೆ 5 ಲಕ್ಷ ವಿದ್ಯುತ್ ಸಂಪರ್ಕ ಒದಗಿಸಲು ನಿರ್ಧರಿಸಿದೆ.
ನಗರ ಪ್ರದೇಶಗಳಲ್ಲಿ 24 ಗಂಟೆಯೊಳಗೆ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳನ್ನು ರಿಪ್ಲೇಸ್ ಮಾಡಬೇಕು ಮತ್ತು ಗ್ರಾಮಗಳಲ್ಲಿ 48 ಗಂಟೆಗಳೊಳಗೆ ಟ್ರಾನ್ಸ್ಫಾರ್ಮರ್ ರಿಪ್ಲೇಸ್ ಮಾಡಬೇಕು ಎಂದು ಜಿಲ್ಲಾಡಳಿತಗಳು ವಿದ್ಯುತ್ ಪೂರೈಕಾ ಇಲಾಖೆಗಳಿಗೆ ಆದೇಶಿಸಿದೆ.
ಗ್ರಾಮಗಳಲ್ಲಿ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ವಿದ್ಯುತ್ ಇರಲೇ ಬೇಕು ಎಂದು ಎಂದು ಅಲ್ಲಿನ ಸಿಎಂ ಸೂಚಿಸಿದ್ದಾರೆ.
ಎಪ್ರಿಲ್ 14ರ ಬಳಿಕ ಜಿಲ್ಲಾ ಕೇಂದ್ರಾಡಳಿತಗಳು 24 ಗಂಟೆ, ತೆಹಶಿಲ್ದಾರ್ಗಳು 20 ಗಂಟೆ ಮತ್ತು ಗ್ರಾಮಗಳು 18 ಗಂಟೆ ವಿದ್ಯುತ್ ಪಡೆಯಬೇಕು ಎಂದು ಆದೇಶಿಸಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.