ನವದೆಹಲಿ: 200.ರೂ ಮುಖಬೆಲೆಯ ನೋಟುಗಳನ್ನು ಹೊರತರಲು ಆರ್ಬಿಐ ಮುಂದಾಗಿದ್ದು, ಈ ನೋಟುಗಳಲ್ಲಿ ಹೊಸ ಸೆಕ್ಯೂರಿಟಿ ಫೀಚರ್ಗಳಿರಲಿವೆ ಎಂದು ಮೂಲಗಳು ತಿಳಿಸಿವೆ.
ಯಾವುದೇ ಕ್ಷಣದಲ್ಲಿ ಬೇಕಾದರೂ 200.ರೂ ನೋಟುಗಳನ್ನು ಆರ್ಬಿಐ ಬಿಡುಗಡೆಗೊಳಿಸಬಹುದು ಎಂದು ವರದಿಗಳು ತಿಳಿಸಿವೆ.
ಅಲ್ಲದೇ ಪ್ರತಿ 3-4 ವರ್ಷಗಳಿಗೊಮ್ಮೆ 500 ಮತ್ತು 2,000.ರೂ ನೋಟುಗಳಿಗೆ ಕೆಲವೊಂದು ಬದಲಾವಣೆಗಳನ್ನು ತಂದು, ಹೊಸ ಸೆಕ್ಯೂರಿಟಿ ಫೀಚರ್ಗಳನ್ನು ಅಳವಡಿಸಲು ಆರ್ಬಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.
ನೋಟ್ ಬ್ಯಾನ್ ಬಳಿಕವೂ ಅಪಾರ ಪ್ರಮಾಣದ ನಕಲಿ ನೋಟುಗಳ ಚಲಾವಣೆ ಪತ್ತೆಯಾದ ಹಿನ್ನಲೆಯಲ್ಲಿ ಆರ್ಬಿಐ ಈ ಯೋಜನೆಯನ್ನು ಹಾಕಿಕೊಳ್ಳುತ್ತಿದೆ. ಕಳೆದ ಗುರುವಾರ ಸರ್ಕಾರದ ಉನ್ನತ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಆರ್ಬಿಐ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.