ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತು 4ನೇ ವಾರ್ಡು ಪಳ್ಳತ್ತಡ್ಕ ಲಕ್ಷಂ ವೀಡು ರಸ್ತೆಯ ಡಾಮರೀಕರಣ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಗ್ರಾಮ ಪಂಚಾಯತು ಸದಸ್ಯೆ ಶಾರದ ಪಳ್ಳತ್ತಡ್ಕ ರಸ್ತೆಯನ್ನು ಉದ್ಘಾಟಿಸಿದರು.
ಅವರು ಮಾತನಾಡಿ ಗ್ರಾಮ ಪಂಚಾಯತು ಆಡಳಿತವು ಬಿಜೆಪಿ ವಾರ್ಡುಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಎಸಗುತ್ತಿದೆ. ಇಲ್ಲವಾಗಿದ್ದರೆ ಈ ರಸ್ತೆಯ ಪೂರ್ಣ ಡಾಮರೀಕರಣ ಎಂದೋ ಆಗಬೇಕಿತ್ತು ಎಂದರು. ಹಿರಿಯ ಕೃಷಿಕರಾದ ರಾಮದಾಸ್ ಶ್ಯಾನುಬೋಗ್ ಅಧ್ಯಕ್ಷತೆ ವಹಿಸಿದರು.
ಗ್ರಾಮ ಪಂಚಾಯತು ಸದಸ್ಯರುಗಳಾದ ಮಹೇಶ್ ವಳಕುಂಜ, ಮಂಜುನಾಥ ಮಾನ್ಯ, ಭಾರ್ಗವಿ ದಾಮೋದರನ್, ಅಲ್ಲದೆ ಬಾಲಕೃಷ್ಣ ಶೆಟ್ಟಿ,ಗಂಗಾಧರ ಪಳ್ಳತ್ತಡ್ಕ, ಕೆ.ಟಿ.ಜೋಸೆಫ್,ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.ಉಷಾರಾಮನ್ ಸ್ವಾಗತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.