ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಶಾಸನಕ್ಕೆ ಪೂರಕವಾದ, ಗರಿಷ್ಠ 40% ಜಿಎಸ್ಟಿ ದರಗಳ 4 ಮಸೂದೆಗಳ ಮಿನಿ ಬಿಲ್ನ್ನು ಕೇಂದ್ರ ಸರ್ಕಾರ ಸಂಸತ್ನಲ್ಲಿ ಮಂಡಿಸಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಜಿಎಸ್ಟಿ ಮಸೂದೆಯ ಕರಡನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಸ್ವಾತಂರತ್ರ್ಯ ನಂತರದ ಅತಿ ದೊಡ್ಡ ತೆರಿಗೆ ಸುಧಾರಣೆ ಬಿಲ್ ಕೊನೆಯ ಹಂತ ತಲುಪಿದೆ. ಸಂಸತ್ನಲ್ಲಿ ಈ ಮಸೂದೆ ಜಾರಿಗೆ ಬಂದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಧಿಸುವ ವಿವಿಧ ತೆರಿಗೆಗಳ ಬದಲು ಒಂದು ಮಾರುಕಟ್ಟೆ- ಒಂದು ದರ ನೀತಿ ಜಾರಿಗೆ ಬರುವ ಮೂಲಕ ಭಾರತವನ್ನು ಏಕೀಕೃತಗೊಳಿಸಲಿದೆ.
ಸಚಿವ ಜೇಟ್ಲಿ ಅವರು ಕೇಂದ್ರ ಸರಕು ಮತ್ತು ಸಾರಿಗೆ ಬಿಲ್ (ಸಿ-ಜಿಎಸ್ಟಿ) ಮಸೂದೆನ್ನು ಪರಿಚಯಿಸಿಸಿದ್ದು, ಇದು ಕೇಂದ್ರ ಸರ್ಕಾರದ ಮಾರಾಟ ತೆರಿಗೆ, ಸೇವಾ ತೆರಿಗೆ, ಕಸ್ಟಮ್ ಸುಂಕ, ಹೆಚ್ಚುವರಿ ಕಸ್ಟಮ್ ಸುಂಕ, ವಿಶೇಷ ಹೆಚ್ಚುವರಿ ಕಸ್ಟಮ್ ಸುಂಕ ಮೊದಲಾದ ಕೇಂದ್ರ ಸರ್ಕಾರ ವಿಧಿಸಿರುವ ಪರೋಕ್ಷ ತೆರಿಗೆಗಳನ್ನು ಒಂದುಗೂಡಿಸಲಿದೆ.
ಸಿ-ಜಿಎಸ್ಟಿ ಶೇ.20 ಗರಿಷ್ಠ ತೆರಿಗೆ ಒದಗಿಸುತ್ತದೆ.
ಜಿಎಸ್ಟಿಯ ವಾಸ್ತವ ದರಗಳು ಜಿಎಸ್ಟಿ ಮಂಡಳಿ ಅಂಗೀಕರಿಸಿದ 4 ಶ್ರೇಣಿಯ ತೆರಿಗೆ ರಚನೆಯ ದರಗಳಾದ 5, 12, 18 ಮತ್ತು 28 ಇರಲಿದೆ.
ಕೇಂದ್ರಾಡಳಿತ ಪ್ರದೇಶಗಳ ಜಿಎಸ್ಟಿ ಮಸೂದೆ, ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ, ಅಂಡಮಾನ್,. ದಮನ್ ಹಾಗೂ ದಿಯು, ಲಕ್ಷದ್ವೀಪ, ದಾದರ್ ಮತ್ತು ನಾಗರ್ ಹವೇಲಿ ಪ್ರದೇಶಗಳ ತೆರಿಗೆ ಕಾಳಜಿ ವಹಿಸಿಕೊಳ್ಳಿದೆ.
ಕೇಂದ್ರ ಸರ್ಕಾರ ಸಂಗ್ರಹಿಸಲಿರುವ ಅಂತರ್-ರಾಜ್ಯಗಳ ಸರಕು ಮತ್ತು ಸೇವೆ ಪೂರೈಕೆ ಮೇಲೆ ವಿಧಿಸಲಾಗುವ ಇಂಟಿಗ್ರೇಟೆಡ್ ಜಿಎಸ್ಟಿ (ಇ-ಜಿಎಸ್ಟಿ) ಮಸೂದೆಯನ್ನು ಲೋಕಸಭೆಗೆ ಪರಿಚಯಿಸಿದ್ದಾರೆ. ಇ-ಜಿಎಸ್ಟಿ ಗರಿಷ್ಠ ಶೇ.40 ತೆರಿಗೆ ವಿಧಿಸಲಿದೆ.
ಎಲ್ಲ ರಾಜ್ಯಗಳಲ್ಲಿ ಆದಾಯ ತೆರಿಗೆ ನಷ್ಟಕ್ಕೆ ವ್ಯವಸ್ಥೆ ಕಲ್ಪಿಸುವ, 5 ವರ್ಷಗಳಿಗೆ ಜಾರಿಯಾಗುವ ಎಸ್-ಜಿಎಸ್ಟಿ (ರಾಜ್ಯಗಳಿಗೆ ಪರಿಹಾರ) ಮಸೂದೆಯನ್ನು ಸಚಿವ ಜೇಟ್ಲಿ ಪರಿಚಯಿಸಿದ್ದಾರೆ.
ಈ ನಾಲ್ಕು ಮಸೂದೆಗಳನ್ನು ಲೋಕಸಭೆಯಲ್ಲಿ ಒಟ್ಟಾಗಿ ಚರ್ಚಿಸಲಾಗುವುದು.
ರಾಜ್ಯಗಳು ಪ್ರತ್ಯೇಕ ರಾಜ್ಯ-ಜಿಎಸ್ಟಿ ಮಸೂದೆ ಹಾಗೂ ಸಂಸತ್ತು ಇತರ ಮಸೂದೆಗಳಿಗೆ ಅನುಮೋದನೆ ನೀಡಿದಲ್ಲಿ ಕೇಂದ್ರತೆರಿಗೆಗಳಾದ ಸೇವಾ ತೆರಿಗೆ ಮತ್ತು ಅಬಕಾರಿ ತೆರಿಗೆ ಹಾಗೂ ಎಲ್ಲ ರಾಜ್ಯಗಳ ವ್ಯಾಟ್ ಮತ್ತಿತರ ತೆರಿಗೆಗಳ ವಿಲೀನದೊಂದಿಗೆ ಒಂದು ರಾಷ್ಟ-ಒಂದೇ ತೆರಿಗೆ ಎಂಬ ಜಿಎಸ್ಟಿ ಶಾಸನ ರಚನೆ ಪ್ರಕ್ರತಿಯೆ ಪೂರ್ಣಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.