ಬೆಳ್ತಂಗಡಿ : ಇಂದಬೆಟ್ಟುವಿನ ನಾವೂರು ಎಂಬಲ್ಲಿ ಬೈಕ್ಗೆ ಕಾರೊಂದು ಡಿಕ್ಕಿಯಾಗಿ ಸಹಸವಾರ ಸಾವನ್ನಪ್ಪಿದ ಘಟನೆ ಸೋಮವಾರ ಸಂಭವಿಸಿದೆ.
ನಾವೂರು ಪುಣ್ಕೆದಡಿ ನಿವಾಸಿ ಉಸ್ಮಾನ್ ಎಂಬವರ ಪುತ್ರ ಸಿದ್ದೀಕ್(22) ಎಂಬ ಯುವಕನೇ ಮೃತಪಟ್ಟವರು. ಈತ ಮಹಮ್ಮದ್ ಎಂಬವರ ಬೈಕಿನಲ್ಲಿ ನಾವೂರದಿಂದ ತನ್ನ ಮನೆಗೆ ಹೋಗುತ್ತಿದ್ದಾಗ ಬಂಗಾಡಿ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಹಿಂಬದಿಯಲ್ಲಿದ್ದ ಸಿದ್ದೀಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಪಾರಾಗಿದ್ದಾರೆ. ಸೋಮವಾರ ನಾವೂರಿನಲ್ಲಿರುವ ದೊಡ್ಡಮ್ಮನ ಮನೆಗೆ ಹೋಗಿದ್ದ.
ಸಂಜೆ ಮಳೆ ಬರುವ ಲಕ್ಷಣ ಇದ್ದುದ್ದರಿಂದ ಮನೆಗೆ ಹೊರಟ್ಟಿದ್ದ. ತನ್ನ ಪರಿಚಯಸ್ಥರ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸಿದ್ದೀಕ್ ಅವರ ಮನೆಗೆ ಒಂದೂವರೆ ಕಿ.ಮೀ. ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಉಸ್ಮಾನ್ ಅವರಿಗೆ ಮೂರು ಹೆಣ್ಣು, ಒಂದು ಗಂಡು ಮಕ್ಕಳು. ಓರ್ವಳಿಗೆ ಮದುವೆಯಾಗಿದೆ.ಇನ್ನಿಬ್ಬರು ಈತನ ತಂಗಿಯಂದಿರು. ಊರಲ್ಲಿರುವಾಗ ಮೇಸ್ತ್ರಿ ಕೆಲಸ ನಿರ್ವಹಿಸಿ ಮನೆಯ ನಿರ್ವಹಣೆಯನ್ನು ಮಾಡುತ್ತಿದ್ದ. ಇದೀಗ ಬೆಂಗಳೂರುನಲ್ಲಿ ಕೆಲಸ ಮಾಡುತ್ತಿದ್ದು ಊರಿಗೆ ಬಂದಿದ್ದ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಆರ್. ಲಿಂಗಪ್ಪ, ಎಸ್ಐ ಮಾಧವ ಕೂಡ್ಲು, ಎಸ್ಐ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.