ಧಾರವಾಡ: ಜಿಲ್ಲೆಯಲ್ಲಿ ಗಂಡು ಹೆಣ್ಣಿನ ಲಿಂಗಾನುಪಾತ 2011ರ ಸಮೀಕ್ಷೆ ಪ್ರಕಾರ ಪ್ರತಿ ಸಾವಿರ ಪುರುಷರಿಗೆ 971 ರ ಅನುಪಾತಕ್ಕೆ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ. 2001ರ ಪ್ರಕಾರ 949 ಕ್ಕೆ ಇದ್ದ ಅನುಪಾತ 51 ಹೆಣ್ಣು ಮಗುವಿನ ಜನನ ಸಂಖ್ಯೆ ಹೆಚ್ಚಾಗಿರುವುದು ಆಶಾದಾಯಕವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿ.ಶ್ರೀಶಾನಂದ ಅವರು ಅಭಿಪ್ರಾಯ ಪಟ್ಟರು.
ನಗರದ ಕುಲಪುರೋಹಿತ ಆಲೂರ ವೆಂಕಟರಾವ್ ಸಭಾ ಭವನದಲ್ಲಿಂದು “ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಿಷೇಧ ಕಾಯ್ದೆ” ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಅಥವಾ ಗಂಡು ಮಗುವಿನ ಜನನಕ್ಕೆ ತಾಯಿ ಕಾರಣಳಲ್ಲ, ಗಂಡಸ್ಸಿನಲ್ಲಿರುವ ಕ್ರೊಮೋಸಮಗಳು ಕಾರಣವೇ ಹೊರತು ಹೆಣ್ಣು ಮಕ್ಕಳ ಅಂಡಾಣು ಅಲ್ಲ, ಹಾಗಾಗಿ ಹೆಣ್ಣು ಮಕ್ಕಳ ಜನನಕ್ಕೆ ಗಂಡಸರೇ ಕಾರಣವಾಗಿದ್ದು, ಅದನ್ನು ಗಂಡಸರು ಅರ್ಥ ಮಾಡಿ ಕೊಳ್ಳಬೇಕಿದೆ ಎಂದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಪ್ರಫುಲ್ಲಾ ನಾಯಕ್ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಬಹಳ ಕಠಿಣವಾಗಿದೆ, ಹೆಣ್ಣು ಮಕ್ಕಳನ್ನು ಸಂರಕ್ಷಿಸಿ ಬೆಳೆಸಬೇಕು, ಹೆಣ್ಣಿನ ಸೃಷ್ಠಿಯಿಂದ ಜಗತ್ತು ಇಂದು ಸುಂದರವಾಗಿದೆ. ಜಗತ್ತಿನ ಸೃಷ್ಠಿಗೆ ಹೆಣ್ಣೆ ಕಾರಣ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಆರ್.ಎಂ.ದೊಡ್ಡಮನಿ, ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ವರ್ಷಪೂರ್ತಿ ಅನುಷ್ಠಾನ ಗೊಳಿಸಲಾಗುವುದು ಎಂದರು.
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಎನ್.ಹೆಗಡೆ ಸ್ವಾಗತಿಸಿದರು. ಅಲ್ಟ್ರಾಸೌಂಡ್ ಸ್ಕ್ಯಾಂನಿಂಗ್ ಯಂತ್ರ ಮಾರಾಟಗಾರರು, ಸ್ಕ್ಯಾಂನಿಂಗ್ ಉಪಯೋಗಿಸುವ ವೈದ್ಯರು ಪಾಲಿಸಬೇಕಾದ ನಿಯಮಗಳ ಕುರಿತು ಡಾ.ಪುಷ್ಪಾ ಎಚ್.ಆರ್. ಹಾಗೂ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ನಿಷೇಧ ಕಾಯ್ದೆ ಕುರಿತು ವಕೀಲ ಪ್ರಕಾಶ ಉಡಕೇರಿ ಅವರು ಮತ್ತು ವೈದ್ಯಕೀಯ ಸಾಮಾಜಿಕ ಜನಸಂಖ್ಯಾ ಲಿಂಗಾನುಪಾತ ಹಾಗೂ ಹೆಣ್ಣು ಭ್ರೂಣ ಹತ್ಯೆಯ ಪರಿಣಾಮಗಳು ಕುರಿತು ಡಾ.ಶಿವಕುಮಾರ ಕುಂಬಾರ ಅವರು ಉಪನ್ಯಾಸ ನೀಡಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಬಿ.ಎಸ್.ಸಂಗಟಿ, ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ.ವ್ಹಿ.ಡಿ.ಕರ್ಪೂರಮಠ ಮಾತನಾಡಿದರು. ನ್ಯಾಯಾಧೀಶ ಎಸ್.ಎಸ್.ಬಳೊಳ್ಳಿ, ವಕೀಲರ ಸಂಘದ ಅಧ್ಯಕ್ಷ ವ್ಹಿ.ಡಿ.ಕಾಮರೆಡ್ಡಿ ಇತರರು ಇದ್ದರು. ಡಾ.ಪುಷ್ಪಾ ಎಚ್.ಆರ್. ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.