ರಾಯಚೂರು: ದಕ್ಷಿಣ ಮಧ್ಯ ರೈಲ್ವೆ ಸ್ಟೇಷನ್ಗಳಿಗೆ ಒಳಪಡುವ 10 ಸ್ಟೇಷನ್ ಗಳಲ್ಲಿ ರಾಯಚೂರು ರೈಲ್ವೆ ನಿಲ್ದಾಣವೂ ಸಂಪೂರ್ಣವಾಗಿ ಕ್ಯಾಶ್ಲೆಸ್ ವ್ಯವಹಾರ ನಡೆಸಲಿದೆ ಎಂದು ಗುಂತಕಲ್ ವಿಭಾಗದ ಎಡಿಆರ್ ಸುಬ್ಬನಾಯುಡು ಹೇಳಿದರು.
ನಗರದ ರೈಲ್ವೆ ಸ್ಟೇಷನ್ನಲ್ಲಿ ಡಿಜಿಟಲ್ ಪೇ ಎನೇಬಲ್ಡ್ ಕಾರ್ಯಕ್ರಮಕ್ಕೆ ಬೋರ್ಡ್ ಮೇಲೆ ಸಹಿ ಮಾಡುವುದರ ಮೂಲಕ ಡಿಜಿಟಲ್ ಪೇ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ದಕ್ಷಿಣ ಮಧ್ಯ ರೈಲ್ವೆಗಳಿಗೆ ಒಳಪಡುವ ಹೈದಾಬಾದ್, ಖಾಚಿಗುಡಿ, ಖಾಕಿನಾಡ, ನಾಂದೀಡ್, ವಿಜಯವಾಡ, ತಿರುಪತಿ ಮತ್ತು ಸಿಕಂದ್ರಬಾದ್ ವಲಯಗಳಲ್ಲಿ ಡಿಜಿಪೇ ಯೋಜನೆಯನ್ನು ಜಾರಿಗೆ ತರಲಾಗಿದೆ. ಗುಂತಕಲ್ ವಿಭಾಗದ ಕರ್ನಾಟಕ ರಾಜ್ಯದಲ್ಲಿ ಗುಂತಕಲ್ ಜಂಕ್ಷನ್ ನಿಂದ ವಾಡಿ ಜಂಕ್ಷನ್ ವರೆಗೆ ಒಳಪಡುವ ಎಲ್ಲಾ ರೈಲ್ವೆ ಸ್ಟೆಷನ್ ಗಳಲ್ಲಿ ಲಭ್ಯವಿರುವ ಡಿಜಿಪೇ ಯೋಜನೆಯನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದರು.
ಈ ಯೋಜನೆ ಅನುಷ್ಠಾನದಿಂದ ಟಿಕೆಟ್ ಬುಕಿಂಗ್, ಕ್ಯಾಂಟೀನ್, ಸರಕು ಸಾಗಣೆ, ಸಾಮಗ್ರಿಗಳ ಖರೀದಿ ಹಾಗೂ ಶೌಚಾಲಯಗಳೆಲ್ಲವೂ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಒಳಪಡಲಿವೆ.
ಗುಂತಕಲ್ ವಿಭಾಗದ ಡಿಸಿಎಮ್ ಸಿ ನಾಗೇಂದ್ರ ಪ್ರಸಾದ್ ಜೆಡ್.ಆರ್.ಸಿ ಸದಸ್ಯರಾದ ಕಮಲ್ ಕುಮಾರ್, ಡಿ.ಆರ್.ಸಿ ನಾರಾಯಣ ಸ್ವಾಮಿ ಬಿ, ಜೆಟಿ ಹೇಮರಾಜ್, ಎಮ್.ವಿವೇಕಾನಂದ ಸೇರಿದಂತೆ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.