ರಾಯಚೂರು: ಆಧುನಿಕತೆ ಭರಾಟೆಯಲ್ಲಿ ಇಂದಿನ ಯುವ ಸಮುದಾಯ ಸಾಹಿತ್ಯದಿಂದ ದೂರ ಸರಿಯುತ್ತಿರುವುದು ಆತಂಕದ ಸಂಗತಿಯಾಗಿದ್ದು, ಅವರನ್ನು ಸಾಹಿತ್ಯದತ್ತ ಸೆಳೆಯುವ ಕಾರ್ಯವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಧ್ಯಕ್ಷ ಡಾ.ಮನು ಬಳಿಗಾರ ಹೇಳಿದದರು.
ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮ್ಯಾದರ್ ಲಲಿತಾ ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಸಮುದಾಯ ಅಂತರ್ಜಾಲಕ್ಕೆ ಮಾರು ಹೋಗುತ್ತಿದ್ದು, ಅವರಲ್ಲಿ ಸಾಹಿತ್ಯದ ಆಸಕ್ತಿ ಕಡಿಮೆಯಾಗುತ್ತಿದ್ದು, ಅವರಲ್ಲಿ ಸಾಹಿತ್ಯಭಿಮಾನ ಬೆಳೆಸುವ ಕಾರ್ಯವಾಗಬೇಕು. ಶಾಸ್ತ್ರೀಯ ಸ್ಥಾನಮಾನ ಪಡೆದ ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುವ ಜತೆಯಲ್ಲಿ ಹಳೆಗನ್ನಡ, ಗಮಕ ಕಲಿಕೆಗೆ ಉತ್ತೇಜನ ನೀಡುವ ನೀಟ್ಟಿನಲ್ಲಿ ರಾಜ್ಯದ ಪತ್ರಿ ಜಿಲ್ಲೆಯಲ್ಲಿ ಐದು ದಿನಗಳ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದರು.
ಕನ್ನಡ ಭಾಷೆ ಬೆಳವಣೀಗೆಗೆ ರಾಜ್ಯದ ಪತ್ರಿ ಜಿಲ್ಲೆಯ 50 ಶಿಕ್ಷಕರಿಗೆ ತರಬೇತಿ ನಿಡುವ ನಿಟ್ಟಿನಲ್ಲಿ 1.5 ಲಕ್ಷ ರೂ ಪ್ರತ್ಯೇಕ ಅನುದಾನವಿದ್ದು, ಪ್ರತಿ ಜಿಲ್ಲೆಯಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು.
ಜಿಲ್ಲೆಯಲ್ಲಿ ನಡೆದ ೮೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈ ಗೊಂಡ ನಿರ್ಣಯಗಳಲ್ಲೊಂದಾದ ಸರ್ವರಿಗೂ ಸಮಾನ ಶಿಕ್ಷಣಕ್ಕೆ ಸರ್ಕಾರ ಸಮ್ಮತಿಸಿದೆ. ಉಳಿದ ನಿರ್ಣಯಗಳು ಅನುಷ್ಠಾನದ ಹಂತದಲ್ಲಿದ್ದು, ಜಿಲ್ಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಮಾದರಿ ಸಮ್ಮೇಳನವಾಗಿದೆ. ಮೈಸೂರಿನಲ್ಲಿ ನಡೆಯುವ ಸಮ್ಮೇಳನ ಅದ್ದೂರಿ ಸಮ್ಮೇಳವನ್ನಾಗಿಸುವ ಉತ್ಸಾಹ ಮೂಡಿಸಿದೆ ಎಂದರು.
ದಿ. ಹೊಸೂರು ರಾಮಸ್ವಾಮಿ ಸ್ಮಾರಕ ದತ್ತಿ ಪ್ರಶಸ್ತಿಗೆ ಭಾಜನರಾದ ಗಾಯಕ ಕವಿತಾಳ ಸಿದ್ದಸ್ವಾಮಿ, ರಂಗಭೂಮಿ ಕಲಾವಿದ ನರಸಿಂಹಲು, ದಿ. ಹನುಮಂತಪ್ಪ ಸಂಜೀವಪ್ಪ ಮ್ಯಾದರ್ ಸ್ಮರಕ ದತ್ತಿ ಪ್ರಶಸ್ತಿಯನ್ನು ಚಿತ್ರಕಲಾವಿದ ಪ್ರಕಾಶ ಆನೆಗುಂದಿ ಭೂಪಾಳ, ದಿ. ರಾಧಮ್ಮ ಭೀಮಣ್ಣ ಸ್ಮಾರಕ ದತ್ತಿ ಪ್ರಶಸ್ತಿಯನ್ನು ನಿವೃತ್ತ ಶಿಕ್ಷಕಿ ಅಜೀಜಾ ಸುಲ್ತಾನಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾ ಕಸಪಾ ಅಧ್ಯಕ್ಷ ಡಾ. ಬಸವ ಪ್ರಭು ಪಾಟೀ ಬೆಟ್ಟದೂರ ದತ್ತಿ ದಾನಿಗಳಾದ ಪಂಪಯ್ಯ ಶಟ್ಟಿ, ಎಚ್.ಎಸ್ ಮ್ಯಾದರ್, ಪ್ರೊ. ಪ್ರಾಣೇಶ ಕುಲಕರ್ಣಿ, ಜಿಲ್ಲಾ ಕಸಾಪ ಕಾಯದರ್ಶಿ ಭಿಮನಗೌಡ ಇಟಗಿ,ಜೆ ಎಲ್ ಈರಣ್ಣ ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.