ಡೆಹರಾಡೂನ್ : ತಾನು ಫೋನ್ ಮೂಲಕ ಕಳುಹಿಸಿದ ಸಮಸ್ಯೆಯ ಬಗ್ಗೆ ಸ್ಪಂದಿಸಿದ ನರೇಂದ್ರ ಮೋದಿಯವರಿಗೆ 11 ನೇ ತರಗತಿಯ ಬಾಲಕಿ ಗಾಯತ್ರಿ ಧನ್ಯವಾದಗಳನ್ನು ತಿಳಿಸಿದ್ದಾಳೆ.
ಉತ್ತರಾಖಂಡ್ ಮೂಲದ ಗಾಯತ್ರಿ ಮಾಲಿನ್ಯದ ಬಗೆಗಿನ ತನ್ನ ಆಡಿಯೋ ಕ್ಲಿಪ್ನ್ನು ಮೋದಿಯ ಮನ್ ಕಿ ಬಾತ್ನಲ್ಲಿ ತಿಳಿಸಲಾದ ಫೋನ್ ನಂಬರ್ಗೆ ಕಳುಹಿಸಿದ್ದಾಳೆ. ಈ ಆಡಿಯೋವನ್ನು ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗಿದ್ದು, ತ್ಯಾಜ್ಯ ಮತ್ತು ಮಾಲಿನ್ಯದ ಗಂಭೀರ ಸಮಸ್ಯೆಯನ್ನು ಆಕೆ ಇದರಲ್ಲಿ ಉಲ್ಲೇಖಿಸಿದ್ದಾಳೆ.
ಈ ಬಗ್ಗೆ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿರುವ ಮೋದಿ, ಮಾಲಿನ್ಯದ ಬಗ್ಗೆ ಗಾಯತ್ರಿ ಕ್ರೋಧಿತಗೊಂಡಿದ್ದಾಳೆ. ದೇಶದ ಎಲ್ಲಾ ನಾಗರೀಕರೂ ಮಾಲಿನ್ಯದ ವಿಷಯದಲ್ಲಿ ಆಕೆಯ ರೀತಿಯ ಕ್ರೋಧವನ್ನೇ ಹೊಂದಬೇಕು. ಆಗ ಮಾತ್ರ ದೇಶ ಸ್ವಚ್ಛಗೊಳ್ಳುತ್ತದೆ ಎಂದಿದ್ದಾರೆ.
ಸರ್ಕಾರ ಮತ್ತು ನಾಗರೀಕರಿಬ್ಬರೂ ಮಾಲಿನ್ಯಕ್ಕೆ ಕಾರಣ ಎಂದು ಗಾಯತ್ರಿ ಹೇಳಿದ್ದು ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಜನ ಸಿಕ್ಕ ಸಿಕ್ಕ ಕಡೆ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ ಎಂದು ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಯಾರಾದರೂ ಈ ಬಗ್ಗೆ ಕ್ರಮ ಕೈಗೊಳ್ಳದ ಹೊರತೂ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾಳೆ.
ಅಲ್ಲದೆ ನನ್ನ ಧ್ವನಿ ಮೋದಿಗೆ ತಲುಪಿದೆ ಮತ್ತು ಅದಕ್ಕೆ ಅವರು ಸ್ಪಂದಿಸಿದ್ದಾರೆ. ಇದು ನನಗೆ ಸಂತಸ ತಂದಿದೆ ಎಂದಿದ್ದಾಳೆ.
ಅಲ್ಲದೆ ಜನ ತ್ಯಾಜ್ಯವನ್ನು ಎಸೆಯದಂತೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದಾಳೆ.
ಇಂದಿನ ಕಾರ್ಯಕ್ರಮದಲ್ಲಿ ಮೋದಿ ಗಾಯತ್ರಿಯ ಸಂದೇಶವನ್ನು ಉಲ್ಲೇಖಿಸಿ ದೇಶದ ಜನತೆಗೆ ಸ್ವಚ್ಛತೆಯ ಅರಿವನ್ನು ಮೂಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.