ನವದೆಹಲಿ: ಸಂಸತ್ನಲ್ಲಿ ಇತ್ತೀಚೆಗೆ ಕಲಾಪಗಳು ಬಹಳ ಬಿರುಸಿನಲ್ಲಿ ನಡೆಯುತ್ತಿದ್ದು, ಅಧಿವೇಶನದಲ್ಲಿ ಘೋಷಣೆಗಳನ್ನು ಕೂಗುವುದು, ಅಡ್ಡಿಪಡಿಸುವುದು ಸಾಮಾನ್ಯವಾಗಿದೆ. ಅಧಿವೇಶನದ ವೇಳೆ ಈ ರೀತಿಯ ಅಡೆತಡೆಗಳನ್ನು ನಿವಾರಿಸಲು ರಾಜ್ಯಸಭೆಯಲ್ಲಿ ಸಂಸತ್ನ ಖಾಸಗಿ ಸದಸ್ಯರು 100 ದಿನಗಳ ಸಂಸತ್ ಅಧಿವೇಶನ ಕೋರಿ ಮಸೂದೆ ಮಂಡಿಸಲಾಗಿದೆ.
ಅಕಾಲಿದಳ ಪಕ್ಷದ ರಾಜ್ಯಸಭಾ ಸಂಸದ ನರೇಶ್ ಗುಜರಾಲ್ ಈ ಮಸೂದೆಯನ್ನು ಜಾರಿಗೆ ತರುವಂತೆ ಕೋರಿ ಸಂಸತ್ನಲ್ಲಿ ಮಸೂದೆಯನ್ನು ಮಂಡಿಸಿದ್ದಾರೆ. ಪ್ರಸ್ತುತ ನಡೆಯುವ ಕಲಾಪಗಳು ಇನ್ನಷ್ಟು ಸರಾಗವಾಗಿ ನಡೆಯಬೇಕು ಎಂದು ಗುಜರಾಲ್ ಹೇಳಿದ್ದಾರೆ.
ನರೇಶ್ ಗುಜರಾಲ್ ಅವರು ಎನ್ಹ್ಯಾನ್ಸ್ಮೆಂಟ್ ಆಫ್ ಪ್ರಾಡಕ್ಟಿವಿಟಿ ಬಿಲ್ನ್ನು ಮಂಡಿಸಿದ್ದು, ವರ್ಷದಲ್ಲಿ ಕನಿಷ್ಠ ೧೦೦ ದಿನಗಳ ಕಾಲ ಸಂಸತ್ ಅಧಿವೇಶನ ನಡೆಯಬೇಕು ಎಂದು ಕೋರಲಾಗಿದೆ.
ಈ ಮಸೂದೆ ಪ್ರತಿ ನಿತ್ಯ ನಾಲ್ಕು ಅವಧಿಗಳ 100 ದಿನಗಳ ಅಧಿವೇಶನ ಅಲ್ಲದೆ, 15 ದಿನಗಳ ವಿಶೇಷ ಅಧಿವೇಶವನ್ನು ನಡೆಸುವಂತೆ ಕೋರಿದೆ.
ಗುಜರಾಲ್ ಅವರ ಈ ಮಸೂದೆಗೆ ಕೇಂದ್ ಸರ್ಕಾರ ಅಂಗೀಕಾರ ನೀಡಿದಲ್ಲಿ, ಸಂಸತ್ ಕಲಾಪ ಹೆಚ್ಚಿನ ಬೆಳವಣಿಗೆ ಪಡೆಯಲಿದೆ ಹಾಗೂ ಸಾರ್ವಜನಿಕರ ಎದುರು ಸಂಸದರು ಸಮರ್ಥಿಸಿಕೊಳ್ಳಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.