ಆಗ್ರಾ: ಉತ್ತರ ಪ್ರದೇಶದ ರಸ್ತೆಗಳಲ್ಲಿ ಯಾವುದೇ ಅಗತ್ಯ ದಾಖಲೆಗಳಿಲ್ಲದೇ ರಾಜಕಾರಣಿಗಳ ಹೆಸರಲ್ಲಿ ಸಂಚರಿಸುತ್ತಿದ್ದ ”ನೇತಾ’ ಬಸ್ಗಳಾದ ಮುಲಾಯಂ ಸಿಂಗ್ ಯಾದವ್ ಟ್ರಾವೆಲ್ಸ್ ಹಾಗೂ ಲಾಲು ಪ್ರಸಾದ್ ಯಾದವ್ ಟ್ರಾನ್ಸ್ಪೋರ್ಟ್ಗೆ ಈಗ ತಡೆ ಬಿದ್ದಿದೆ.
ಇತರ ವಾಹನಗಳಿಗೆ ಟ್ರಾಫಿಕ್ ಸಮಸ್ಯೆ ಉಂಟುಮಾಡಿ ಖುದ್ದು ಸಂಚಾರ ನಿಯಮ ಉಲ್ಲಂಘನೆ ಮತ್ತು ನಿಯಮ ಉಲ್ಲಂಘನೆ ಮಾಡುತ್ತಿದ್ದು ಆಗ್ರಾದ ಸುಮಾರು 70 ಹಾಗೂ ಫಿರೋಜಾಬಾದ್ನ 200 ಬಸ್ಗಳಿಗೆ ಸಂಚಾರಿ ಇಲಾಖೆ ಅಧಿಕಾರಿಗಳು ಈಗ ದಂಡ ವಿಧಿಸಲು ಆರಂಭಿಸಿದ್ದಾರೆ. ಅಲ್ಲದೇ ಈ ನೇತಾ ಬಸ್ಗಳು ರಸ್ತೆಗೆ ಇಳಿಯದಂತೆ ಮಾಡಲು ಮುಂದಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಹೊಸ ನೀತಿಗಳನ್ನು ಕೈಗೊಳ್ಳುತ್ತಿದ್ದು, ಇಂತಹ ವಾಹನಗಳು ನಗರದ ರಸ್ತೆಗಳಲ್ಲಿ ಸಂಚರಿಸಂತೆ ಖಚಿತಪಡಿಸಲು ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಬಸ್ಗಳು ಆಗ್ರಾ, ದೆಹಲಿ, ಇಟಾವಾ, ಇತಾಹ್, ಲಖ್ನೌ ಮಾರ್ಗವಾಗಿ ಸಂಚರಿಸುತ್ತಿದ್ದು, ಇದರಿಂದ ಸಾರಿಗೆ ಇಲಾಖೆ ತೊಂದರೆ ಅನುಭವಿಸುತ್ತಿವೆ. ರಾಜ್ಯ ಪ್ರತಿ ತಿಂಗಳು ಶೇ. 30-35ರಷ್ಟು ತೆರಿಗೆ ನಷ್ಟ ಅನುಭವಿಸುತ್ತಿದೆ. ಅಸಭ್ಯವಾಗಿ ವರ್ತಿಸುವ ಬಸ್ಗಳ ಚಾಲಕ-ಮಾಲಕರು ಪ್ರಯಾಣಿಕರಿಂದ ಹೆಚ್ಚಿನ ಶುಲ್ಕವನ್ನೂ ಪಡೆಯುತ್ತಿವೆ ಎಂದು ಆಗ್ರಾ ರೋಡ್ವೇಸ್ನ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.