ಪಾಟ್ನಾ: ಬಿಹಾರ ಉದ್ಯಮಿಗಳ ಅಸೋಸಿಯೇಶನ್ ಆಯೋಜಿಸಿದ್ದ ಬಿಹಾರ ಉದ್ಯಮ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರ ಸ್ಟಾರ್ಟ್ಅಪ್ ನೀತಿ 2017 ಬಿಡುಗಡೆ ಮಾಡಿದ್ದಾರೆ.
ಬಿಹಾರ 2016ರಲ್ಲಿ ಸ್ಟಾರ್ಟ್ಅಪ್ ನೀತಿ ಪರಿಚಯಿಸಿದ್ದು, ಅದು ಸ್ಟಾರ್ಟ್ಅಪ್ ನೀತಿ ಆರಂಭಿಸಿದ ಕೆಲವೇ ಕೆಲವು ರಾಜ್ಯಗಳಲ್ಲಿ ಒಂದಾಗಿದೆ. ಸ್ಟಾರ್ಟ್ಅಪ್ ನೀತಿಯಲ್ಲಿ ಪ್ರತಿಕ್ರಿಯೆ, ಸಲಹೆಗಳ ಆಧಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಮತ್ತೆ ಬಿಡುಗಡೆ ಮಾಡಲಾಗಿದೆ.
ಸಮಾರಂಭದಲ್ಲಿ ಮಾತನಾಡಿದ ನಿತೀಶ್ ಕುಮಾರ್, ಮಹಿಳಾ ಸಬಲೀಕರಣ ಮತ್ತು ಯುವಕರನ್ನು ಪ್ರೋತ್ಸಾಹಿಸುವ ಕೆಲವು ಯೋಜನೆಗಳನ್ನು ಸೂಚಿಸಿದರು. ಯುವಕರು ಮತ್ತು ಉದ್ಯಮಿಗಳಿಗೆ ಹೊಸ ಸ್ಟಾರ್ಟ್ಅಪ್ ನೀತಿ ಆರಂಭಿಸಿದ್ದೇವೆ. ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು 500 ಕೋಟಿ ರೂ. ನಿಧಿ ಘೋಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಿಹಾರವನ್ನು ಉದ್ಯಮ ಮತ್ತು ಸ್ಟಾರ್ಟ್ಅಪ್ಗಳ ತಾಣವನ್ನಾಗಿ ಮಾಡುವುದು ಇದರ ಮುಖ್ಯ ಗುರಿಯಾಗಿದೆ.
ಸ್ಟಾರ್ಟ್ಅಪ್ ನೀತಿ 50,000 ರೂ. ಮೂಲ ದರದ ನೋಡಲ್ ಸಂಸ್ಥೆ ಸ್ಥಾಪಿಸಿದೆ. ಸ್ಟಾರ್ಟ್ಅಪ್ಗಳು 10 ವರ್ಷಗಳ ಅವಧಿಗೆ 10 ಲಕ್ಷ ರೂ. ಬಡ್ಡಿರಹಿತ ಸಾಲ ಪಡೆಯಲಿದೆ.
ಬಿಹಾರ ಇನ್ನೋವೇಷನ್ ಹಬ್ ಹಂಚಿಕೆಯ ಕಾರ್ಯಸ್ಥಳಗಳು, ಹಣಕಾಸು ನಿಧಿ, ಮೌಲ್ಯಮಾಪನ ಸಲಹೆ, ಮತ್ತಿತರ ವಿಷಯಗಳಿಗೆ ಸ್ಟಾರ್ಟ್ಅಪ್ಗಳಿಗೆ ಇಂಕ್ಯೂಬೇಷನ್ ಸೇವೆಗಳನ್ನು ಒದಗಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.