ನವದೆಹಲಿ: ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ ಆರು ರಾಜ್ಯಗಳಲ್ಲಿ ಒಟ್ಟು 5,773 ಕೋಟಿ ರೂ. ವೆಚ್ಚದಲ್ಲಿ 1,17,814 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದಕ್ಕೆ ಕೇಂದ್ರ ಸರ್ಕಾರ 1,816 ಕೋಟಿ ನೆರವು ನೀಡಲಿದೆ.
ಪಿಎಂಎವೈ (ನಗರ) ಅಡಿಯಲ್ಲಿ ಮನೆಗಳ ನಿರ್ಮಾಣದ ವೇಗ ಹೆಚ್ಚುತ್ತಿದ್ದು, ಹೂಪಾ ಸಚಿವ ಎಂ. ವೆಂಕಯ್ಯ ನಾಯ್ಡು ಅವರು, ನಗರ ಮತ್ತು ರಾಜ್ಯ ಸರ್ಕಾರಗಳು ತ್ವರಿತ ಗತಿಯಲ್ಲಿ ನಿರ್ಮಾನ ಕಾರ್ಯ ನಡೆಸುವ ಬಗ್ಗೆ ಖಚಿತಪಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಮಧ್ಯಪ್ರದೇಶ ರಾಜ್ಯದ 43 ನಗರಗಳಲ್ಲಿ ಒಟ್ಟು 1,713 ಕೋಟಿ ರೂ. ವೆಚ್ಚದಲ್ಲಿ 27,475 ಮನೆಗಳ ನಿರ್ಮಾಣಕ್ಕೆ ಮಂಜೂರು ನೀಡಲಾಗಿದ್ದು, ಕೇಂದ್ರ ಸರ್ಕಾರದಿಂದ 412 ಕೋಟಿ ರೂ. ನೆರವಿಗೆ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಮಧ್ಯಪ್ರದೇಶದಲ್ಲಿ ಈವರೆಗೆ 2,09,036 ಮನೆಗಳ ನಿರ್ಮಾಣಕ್ಕೆ ಮಂಜೂರು ಮಾಡಿದಂತಾಗಿದೆ. ತಮಿಳುನಾಡಿನಲ್ಲಿ ಅತ್ಯಧಿಕ 2,27,900 ಮನೆಗಳ ನಿರ್ಮಾಣಕ್ಕೆ ಮಂಜೂರು ನೀಡಲಾಗಿದೆ.
ಬಿಹಾರದ 31 ನಗರಗಳಲ್ಲಿ ಒಟ್ಟು 1,208 ಕೋಟಿ ರೂ. ವೆಚ್ಚದಲ್ಲಿ 25,221 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
ಜಾರ್ಖಂಡ್ನ 36 ನಗರಗಳಲ್ಲಿ ಪಿಎಂಎವೈಯ ಫಲಾನುಭವಿಗಳ ನೇತೃತ್ವದ (ಬಿಎಲ್ಸಿ) ಅಡಿಯಲ್ಲಿ 728 ಕೋಟಿ ರೂ. ವೆಚ್ಚದಲ್ಲಿ 20,099 ಮನೆಗಳ ನಿರ್ಮಾಣಕ್ಕೆ ಮಂಜೂರು ನೀಡಲಾಗಿದ್ದು, ಒಟ್ಟು ಮನೆಗಳ ಸಂಖ್ಯೆ 64,555ಕ್ಕೆ ತಲುಪಿದೆ.
ಒಡಿಸಾದ 8 ನಗರಗಳಲ್ಲಿ 2,115 ಮನೆಗಳು, ಕರ್ನಾಟಕದಲ್ಲಿ 31,424 ಹಾಗೂ ಕೇರಳದಲ್ಲಿ 11,480 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.