ನವದೆಹಲಿ: ಉತ್ತರಪ್ರದೇಶ ಹೇಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕನಸು ಕಾಣುತ್ತಿದ್ದಾರೋ ಅದೇ ರೀತಿಯಾಗಿ ಯುಪಿಯನ್ನು ಬದಲಾಯಿಸಲಿದ್ದೇವೆ ಎಂದು ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಆಗಿ ಅಧಿಕಾರವೇರಿರುವ ಅವರು, ಉತ್ತರಪ್ರದೇಶವನ್ನು ದೇಶದ ಸರ್ವೋಚ್ಚ ರಾಜ್ಯವನ್ನಾಗಿ ಮಾಡಲಿದ್ದೇವೆ ಎಂಬ ಭರವಸೆ ನೀಡಿದ್ದಾರೆ.
ಪ್ರಧಾನಿಯ ನಾಯಕತ್ವ ಕೌಶಲ್ಯವನ್ನು ಕೊಂಡಾಡಿದ ಯೋಗಿ, ಮೋದಿ ಐಕಾನ್ ಆಗಿ ಹೊರಹೊಮ್ಮಿದ್ದು, ಜಗತ್ತಲ್ಲೇ ಒಂದು ಉದಾಹರಣೆಯನ್ನು ನಿರ್ಮಿಸಿದ್ದಾರೆ. ಯಾವುದೇ ತಾರತಮ್ಯವಿಲ್ಲದೆ ಬಡವರಿಗಾಗಿ, ರೈತರಿಗಾಗಿ ಸರ್ಕಾರ ನಡೆಸಲು ಕಟಿಬದ್ಧರಾಗಿದ್ದಾರೆ ಎಂದರು.
ಉತ್ತರಪ್ರದೇಶ ಮೋದಿಯ ಕನಸಿನ ರಾಜ್ಯವಾಗಿ ಹೊರಹೊಮ್ಮಲಿದೆ, ದೇಶದಲ್ಲೇ ಅತ್ಯುತ್ತಮ ರಾಜ್ಯವೆಂದು ಕರೆಸಿಕೊಳ್ಳಲಿದೆ. ಯುವಜನತೆ ಉದ್ಯೋಗ ಅರಸಿ ಬೇರೆಲ್ಲಿಗೂ ಹೋಗದಂತೆ ಅಭಿವೃದ್ಧಿಯನ್ನು ಮಾಡುತ್ತೇವೆ. ಭ್ರಷ್ಟಾಚಾರ, ಅಸ್ಥಿರತೆ, ಗೂಂಡಾಗಿರಿ ಮುಕ್ತ ರಾಜ್ಯದ ನಿರ್ಮಾಣ ಮಾಡುತ್ತೇವೆ ಎಂದರು.
ಸಮಾಜದ ಎಲ್ಲಾ ವರ್ಗದ ಜನರಿಗಾಗಿಯೂ ನಾವು ಕಾರ್ಯನಿರ್ವಹಿಸುತ್ತೇವೆ, ಎಲ್ಲಾ ಪ್ರದೇಶಗಳ ಅಭಿವೃದ್ಧಿಯನ್ನೂ ಮಾಡುತ್ತೇವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.