ಮುಂಬೈ : ‘ನಮಾಮಿ ಬ್ರಹ್ಮಪುತ್ರ’ ಥೀಮ್ ಸಾಂಗ್ನ್ನು ಅಸ್ಸಾಂನ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಅವರು ಮಂಗಳವಾರ ಲೋಕಾರ್ಪಣೆಗೊಳಿಸಿದರು.
ಗುವಾಹಟಿಯ ಮಾಧವದೇವ ಇಂಟರ್ನ್ಯಾಷನಲ್ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಥೀಮ್ ಸಾಂಗ್ನ್ನು ಲೋಕಾರ್ಪಣೆಗೊಳಿಸಲಾಯಿತು.
ದೇಶದ ಸಂಸ್ಕೃತಿ, ಪ್ರವಾಸೋದ್ಯಮ, ಆರ್ಥಿಕತೆ, ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ನಮಾಮಿ ಬ್ರಹ್ಮಪುತ್ರ’ ಮಹೋತ್ಸವ ನಡೆಯಲಿದೆ. ವಿಶೇಷವಾಗಿ ಜಾಗತಿಕ ಮಟ್ಟದಲ್ಲಿ ಅಸ್ಸಾಂ ಒಂದು ಅಪರೂಪದ ಪ್ರವಾಸೋದ್ಯಮ ಕೇಂದ್ರವನ್ನಾಗಿಸುವ ಉದ್ದೇಶದಿಂದ, ಇದಕ್ಕೆ ಪೂರಕವಾಗಿ ಈ ಗೀತೆಯನ್ನು ಲೋಕಾರ್ಪಣೆಗೊಳಿಸಲಾಗಿದೆ.
ಬ್ರಹ್ಮಪುತ್ರ ನದಿಯ ಕುರಿತಾಗಿ ಇರುವ ಈ ಗೀತೆಯನ್ನು ಅಮಿತಾಬ್ ಬಚ್ಚನ್, ಅನುರಾಗ್ ಮಹಂತಾ (ಪಾಪನ್), ಅರ್ಜಿತ್ ಸಿಂಗ್, ಸೋನು ನಿಗಮ್, ಶ್ರೇಯಾ ಘೋಷಾಲ್, ಉಷಾ ಉತ್ತುಪ್, ಶಂಕರ್ ಮಹದೇವನ್, ಶುಭಾ ಮುಂಡ್ಗಲ್, ಜುಬೇನ್ ಗಾರ್ಗ್, ಪುಲಕ್ ಬ್ಯಾನರ್ಜಿ, ಜಿತುಲ್ ಸೋನಾವಾಲ್, ಕೈಲಾಶ್ ಖೇರ್, ಸೇರಿದಂತೆ ಹೆಸರಾಂತ ಹಲವಾರು ಗಾಯಕ, ಗಾಯಕಿಯರು ಹಾಡಿದ್ದಾರೆ.
ಗೀತೆಯು ಅಸ್ಸಾಮಿ ಮತ್ತು ಹಿಂದಿ ಭಾಷೆಯಲ್ಲಿದ್ದು, ಅಸ್ಸಾಂ ಸಾಹಿತ್ಯವನ್ನು ಮೊಹಂತ್ ಬಷ್ಯಾ ಬರೆದಿದ್ದು, ಹಿಂದಿ ಸಾಹಿತ್ಯವನ್ನು ಸ್ವಾನಂದ್ ಕಿರ್ಕಿರೆ ಬರೆದಿದ್ದಾರೆ. ಅನುರಾಗ್ ಮಹಂತ (ಪಾಪನ್) ಅವರು ಸಂಯೋಜಕರಾಗಿದ್ದಾರೆ.
ಅಸ್ಸಾಂನ 21 ಜಿಲ್ಲೆಗಳಲ್ಲಿ 5 ದಿನಗಳ ಕಾಲ ನಮಾಮಿ ಬ್ರಹ್ಮಪುತ್ರ ಉತ್ಸವವು ಮಾರ್ಚ್ 31 ರಿಂದ ಏಪ್ರಿಲ್ 4 ರ ವರೆಗೆ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.