ನವದೆಹಲಿ: ಅಲ್ಲಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲ್ಗಳು, ಇತರ ಪ್ಲಾಸ್ಟಿಕ್ ಉತ್ಪನ್ನಗಳು ಸ್ವಚ್ಛ ಭಾರತ ಅಭಿಯಾನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುವುದೇ ದೊಡ್ಡ ಸಹಾಸವಾಗಿದೆ.
ಹೀಗಾಗೀ ಸರ್ಕಾರ ಪ್ಲಾಸ್ಟಿಕ್ಗೆ ಪ್ಲಾಸ್ಟಿಕ್ ಸರ್ಜರಿ ಮಾಡಲು ಹೊರಟಿದ್ದು, ಪ್ಲಾಸ್ಟಿಕ್ ತ್ಯಾಜ್ಯದ ಸಂಗ್ರಹದ ಭಾರವನ್ನು ಪ್ಲಾಸ್ಟಿಕ್ ಉತ್ಪಾದಕರ ಮೇಲೆ ಹೊರಿಸಲು ಮುಂದಾಗಿದೆ.
ಎಸೈಕಲ್ ಮಾಡಲು ಸಹಕಾರಿಯಾಗುವಂತೆ ಪ್ಲಾಸ್ಟಿಕ್ ಉತ್ಪಾದಕರು ವೇಸ್ಟ್ ಪ್ಲಾಸ್ಟಿಕ್ಗಳನ್ನು ಹಿಂಪಡೆಯಲು ಪ್ರಯತ್ನ ನಡೆಸಬೇಕು ಎಂಬ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ.
ಈ ಬಗೆಗಿನ ನೋಟಿಫಿಕೇಶನನ್ನು ಶೀಘ್ರದಲ್ಲೇ ಹೊರಡಿಸುವುದಾಗಿ ರಾಜ್ಯಸಭೆಗೆ ಕೇಂದ್ರ ಪರಿಸರ ಸಚಿತ ಪ್ರಕಾಶ್ ಜಾವ್ಡೇಕರ್ ಮಾಹಿತಿ ನೀಡಿದ್ದಾರೆ.
ಪ್ಲಾಸ್ಟಿಕ್ ಉಪಯೋಗಕರವಾಗಿದೆ ಆದರೆ ಅಸಂಗ್ರಹಿತ ಪ್ಲಾಸ್ಟಿಕ್ ಕೆಟ್ಟದು ಎಂದಿರುವ ಅವರು, ವಾರ್ಷಿಕ 2 ಮಿಲಿಯನ್ ಟನ್ನಷ್ಟು ಪ್ಲಾಸ್ಟಿಕ್ ಅಸಂಗ್ರಹಿತವಾಗಿರುತ್ತದೆ ಎಂದಿದ್ದಾರೆ.
]ಅಲ್ಲದೇ ಹೆದ್ದಾರಿಗಳ ಪಕ್ಕದಲ್ಲಿ, ರೈಲ್ವೇ ಟ್ರ್ಯಾಕ್ ಪಕ್ಕದಲ್ಲಿ ಗಿಡಗಳನ್ನು ನೆಟ್ಟು ಪರಿಸರವನ್ನು ಹಸಿರಾಗಿಸುವ ಯೋಜನೆಯೂ ಸರ್ಕಾರದ ಮುಂದಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.