ನವದೆಹಲಿ: ಭಾರತದಲ್ಲಿ ಮಲ್ಟಿನ್ಯಾಷನಲ್ ಕಂಪನಿಗಳ ಉತ್ಪನ್ನಗಳಿಗೆ ಸೆಡ್ಡು ಹೊಡೆಯುತ್ತಿರುವ ಬಾಬಾ ರಾಮ್ದೇವ್ ಅವರ ಪತಂಜಲಿ ಆರ್ಯುವೇದ ಲಿಮಿಟೆಡ್ ಇದೀಗ ತನ್ನ ಉತ್ಪನ್ನಗಳನ್ನು ಚೀನಾ, ಮಯನ್ಮಾರ್, ಬಾಂಗ್ಲಾದೇಶ ಸೇರಿದಂತೆ ಇತರ ಪೂರ್ವ ಏಷ್ಯಾ ರಾಷ್ಟ್ರಗಳಿಗೆ ರಫ್ತು ಮಾಡಲು ಮುಂದಾಗಿದೆ.
ಈಗಾಗಲೇ ರಾಮ್ದೇವ್ ಅವರು ಚೀನಾದಲ್ಲಿ ಪತಂಜಲಿ ಪರಿಚಯಿಸಲು ಸಿದ್ಧರಾಗಿದ್ದು, ಸರ್ಕಾರದ ‘ಆಕ್ಟ್ ಈಸ್ಟ್’ ನಿಯಮದಿಂದ ಸಹಾಯ ಪಡೆಯಲಿದ್ದಾರೆ. ಈ ನಿಯಮದ ಮೂಲಕ ಸರ್ಕಾರ ಭಾರತದ ಪೂರ್ವಕ್ಕಿರುವ ರಾಷ್ಟ್ರಗಳೊಂದಿಗೆ ವ್ಯವಹಾರ ನಡೆಸುವ ಗುರಿ ಹೊಂದಿದೆ.
ಪತಂಜಲಿ ಆರ್ಯುವೇದದ ಉತ್ಪಾದನ ಘಟಕವೊಂದು ಜರ್ಖಾಂಡ್ನ ಶಹಿಬ್ಗಂಜ್ನಲ್ಲಿ ಆರಂಭಗೊಳ್ಳಲಿದ್ದು, ಇದು ಸರ್ಕಾರದ ಯೋಜನೆಯಂತೆ ರಸ್ತೆ, ಜಲ ಮಾರ್ಗ ಮತ್ತು ವಾಯು ಮಾರ್ಗದ ಮೂಲಕ ನೆರೆಯ ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ನೇರ ಸಂಪರ್ಕ ಹೊಂದುವ ಮಲ್ಟಿ-ಮೊಡಲ್ ಹಬ್ ಆಗಲಿದೆ.
ತನ್ನ ಉತ್ಪನ್ನಗಳನ್ನು ರಫ್ತು ಮಾಡುವ ಸಲುವಾಗಿ ಪತಂಜಲಿ ಭಾರತದ ಇನ್ಲ್ಯಾಂಡ್ ವಾಟರ್ ವೇ ಅಥಾರಿಟಿ ಮತ್ತು ಶಿಪ್ಪಿಂಗ್ ಮಿನಿಸ್ಟರ್ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆಯಲ್ಲಿ ತೊಡಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.