ರಾಜಕೀಯ ಪಕ್ಷಗಳು ಭ್ರಷ್ಟ ಇರುವುದೇನು ಹೊಸದಲ್ಲ ಬಿಡಿ ಅನ್ನುವಿರಾ? ನಿಮ್ಮ ಮಾತು ನಿಜ ಇರಬಹುದು. ಆದರೆ ಇಡೀ ಜಗತ್ತಿನ ಅತೀ ಹೆಚ್ಚು ಭ್ರಷ್ಟವಾಗಿರುವ ಟಾಪ್ 10 ಪಕ್ಷಗಳು ಯಾವುವು ? ಅದರಲ್ಲಿ ಭಾರತದ ರಾಜಕೀಯ ಪಕ್ಷ ಯಾವುದಾದರೂ ಇದೆಯಾ ? ಈ ಕುರಿತು ಬಿಬಿಸಿ 10 ಪಕ್ಷಗಳ ಹೆಸರನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
1. ಪಾಕಿಸ್ಥಾನ ಮುಸ್ಲಿಂ ಲೀಗ್ ನವಾಜ್ : ಪಾಕಿಸ್ಥಾನ
ನವಾಜ್ ಷರೀಫ್ ನೇತೃತ್ವದ ಪಾಕಿಸ್ಥಾನ್ ಮುಸ್ಲಿಂ ಲೀಗ್ ಪಕ್ಷವೂ ಜಗತ್ತಿನ ಟಾಪ್-1 ಭ್ರಷ್ಟ ಪಕ್ಷವಂತೆ. ಈ ಪಕ್ಷದ ಅನೇಕರ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಸ್ವತಃ ಪ್ರಧಾನ ಮಂತ್ರಿ ನವಾಜ್ ಷರೀಫ್ ಅವರ ಹೆಸರು ಪನಾಮಾ ಲೀಕ್ ಪ್ರಕರಣದಲ್ಲೂ ತಳಕು ಹಾಕಿಕೊಂಡಿದೆ.
2. ನ್ಯಾಶನಲ್ ರೆಸಿಸ್ಟನ್ಸ್ ಮೂವ್ಮೆಂಟ್: ಉಗಾಂಡಾ
ಅನೇಕ ವಿವಾದಗಳು ಹಾಗೂ ಹಗರಣಗಳಲ್ಲಿ ಭಾಗಿಯಾಗಿರುವ ನ್ಯಾಶನಲ್ ರೆಸಿಸ್ಟನ್ಸ್ ಮೂವ್ಮೆಂಟ್ ಪಕ್ಷವು ಎರಡನೇ ಅತೀ ಹೆಚ್ಚು ಭ್ರಷ್ಟತೆ ಹೊಂದಿದ ಪಕ್ಷವಂತೆ. ವಿಶೇಷವಾಗಿ ಯುದ್ಧ ವಿವಾದಗಳಲ್ಲಿ ಈ ಪಕ್ಷವು ಸಿಲುಕಿದೆಯಂತೆ.
3. ಪ್ರೊಗ್ರೆಸ್ಸಿವ್ ಆಕ್ಷನ್ ಪಾರ್ಟಿ: ಕ್ಯೂಬಾ
ಫಲ್ಗೆನ್ಸಿಯೊ ಬಟಿಸ್ಟಾ ನೇತೃತ್ವದ ಈ ಪಕ್ಷವೂ ಕಡುಭ್ರಷ್ಟವಾಗಿದ್ದು, 1958ರಲ್ಲೇ ಇದು ನಿಷೇಧಕ್ಕೂ ಒಳಗಾಗಿದೆಯಂತೆ. ಚುನಾವಣಾ ಅಕ್ರಮ, ಅಕ್ರಮ ಹಣ ಗಳಿಕೆ, ಕಾನೂನು ಉಲ್ಲಂಘನೆ, ಅನೇಕ ನಾಗರಿಕರ ಸಾವಿಗೆ ಕಾರಣ ಹೀಗೇ ಅಸಂಖ್ಯ ಅಕ್ರಮಗಳಲ್ಲಿ ಭಾಗಿಯಾಗಿತ್ತಂತೆ ಈ ಪಕ್ಷ.
4. ಇಂಡಿಯನ್ ನ್ಯಾಶನಲ್ ಕಾಂಗ್ರೆಸ್: ಭಾರತ
ಸೋನಿಯಾ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತೀಯ ನ್ಯಾಶನಲ್ ಕಾಂಗ್ರೆಸ್ಗೆ 4 ನೇ ಸ್ಥಾನ ನೀಡಿದೆ ಬಿಬಿಸಿ ವರದಿ. 10 ವರ್ಷಗಳಲ್ಲಿ ಮಾಡಿದ ಅನೇಕ ಭಾರಿ ಹಗರಣಗಳು. ಅದರ ಪರಿಣಾಮವೇ ಕಾಂಗ್ರೆಸ್ 2014 ರ ಚುನಾವಣೆಯಲ್ಲಿ ಮಣ್ಣು ಮುಕ್ಕಲು ಕಾರಣ ಎನ್ನಲಾಗಿದ್ದು, ಕೋಟಿಗಟ್ಟಲೇ ಹಣವನ್ನು ದೇಶದ ಬೊಕ್ಕಸದಿಂದ ಕಾಂಗ್ರೆಸ್ ಕೊಳ್ಳೆ ಹೊಡೆದಿದೆ ಎನ್ನಲಾಗಿದೆ.
5. ವಿಯೆಟ್ನಾಂ ಕಮ್ಯುನಿಸ್ಟ್ ಪಾರ್ಟಿ: ವಿಯೆಟ್ನಾಂ
ರೂಲಿಂಗ್ ಆಂಡ್ ಫಂಡಿಂಗ್ ಪಾರ್ಟಿ ಎಂದೇ ಗುರುತಿಸಿಕೊಂಡಿದೆಯಂತೆ ಈ ಪಕ್ಷ. ತಾನೂ ಭ್ರಷ್ಟವಾಗಿದ್ದಲ್ಲದೇ ಜನರನ್ನು ಭ್ರಷ್ಟತೆಯ ಕೂಪಕ್ಕೆ ತಳ್ಳುವಲ್ಲಿ ಮುಂಚೂಣಿಯಲ್ಲಿದೆಯಂತೆ. ಕಮ್ಯನಿಸ್ಟೇತರ ಸಾವಿರಾರು ಜನರನ್ನು ಜೈಲಿಗೆ ತಳ್ಳಿದ ಕುಖ್ಯಾತಿಯೂ ಈ ಪಕ್ಷಕ್ಕಿದೆಯಂತೆ. ಕೊನೆಗೆ 1976 ರಲ್ಲಿ ಮಾಡರ್ನ್ ಪಾರ್ಟಿಯಲ್ಲಿ ವಿಲೀನಗೊಂಡಿತಂತೆ.
6. ಕೌಮಿನಿತಂಗ್ : ಚೈನಾ
ಇದು ಚೈನಾದ ಬಹು ಪ್ರಬಲ ಪಕ್ಷ. ಮಾರ್ಷಲ್ ಕಾನೂನನ್ನು ಅನುಸರಿಸುವಂತೆ ಇಲ್ಲಿನ ಸರ್ಕಾರ ಒತ್ತಾಯಪೂರ್ವಕವಾಗಿ ಜನರ ಮೇಲೆ ಹೇರುತ್ತಂತೆ. ಆದರೆ ಸಾಕಷ್ಟು ಜನ ಇದನ್ನು ವಿರೋಧಿಸುತ್ತಾರೆ.
7. ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿ: ಇಟಲಿ
ಬೆನಿಟೊ ಮುಸಲೋನಿಯಿಂದ ಆರಂಭವಾಯಿತಂತೆ ಈ ಪಾರ್ಟಿ. ಹಿಟ್ಲರ್ ಹಾಗೂ ಮುಸಲೋನಿ ಆಡಳಿತ ತೀರ ದಬ್ಬಾಳಿಕೆಯಿಂದ ಕೂಡಿತ್ತಂತೆ. ಸ್ಮಗ್ಲಿಂಗ್ನಂತಹ ಅನೇಕ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದ ಈ ಪಕ್ಷವು, ಭ್ರಷ್ಟಾಚಾರದಲ್ಲಿ ಮುಳುಗಿತ್ತಂತೆ.
8. ನಾಜಿ ಪಾರ್ಟಿ: ಜರ್ಮನಿ
ನ್ಯಾಶನಲ್ ಸೋಷಿಯಾಲಿಸ್ಟ್ ಜರ್ಮನ್ ವರ್ಕರ್ಸ ಪಾರ್ಟಿಯು ನಾಜಿ ಪಾರ್ಟಿ ಎಂದು ಗುರುತಿಸಿಕೊಂಡಿದೆ. ಯಹೂದಿ ವಿರೋಧಿ ಅಜೆಂಡಾ ಹಾಗೂ ಭಾರೀ ಭ್ರಷ್ಟಾಚಾರ ಈ ಪಕ್ಷದ ಪ್ರಮುಖ ಲಕ್ಷಣಗಳಂತೆ.
9. ಕಮ್ಯನಿಸ್ಟ್ ಪಾರ್ಟಿ ಆಫ್ ಚೈನಾ: ಚೈನಾ
ಇದೊಂದು ಪ್ರಮುಖ ಹಾಗೂ ಪ್ರಬಲ ಆಡಳಿತ ಪಕ್ಷ. ಈ ಪಕ್ಷದ ಆಡಳಿತವು ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವನ್ನೇ ನೀಡುವುದಿಲ್ಲ. ನಾಗರಿಕರ ಅಭಿಪ್ರಾಯಗಳಿಗೆ ಅಲ್ಲಿ ಬೆಲೆಯೇ ಇಲ್ಲವಂತೆ. ಅದೊಂದು ರೀತಿ ನಿರಂಕುಶ ಪ್ರಭುತ್ವವಂತೆ.
10. ಕಮ್ಯುನಿಸ್ಟ್ ಪಾರ್ಟಿ ಆಫ್ ಸೋವಿಯತ್ ಯೂನಿಯನ್: ರಷ್ಯ
ರಷ್ಯಾದಲ್ಲಿ ಇದು ಪ್ರಬಲ ಪಕ್ಷವಾಗಿದೆ. ಇದೊಂದು ಏಕಸ್ವಾಮ್ಯ ಹೊಂದಿದ ಪಕ್ಷವಾಗಿದ್ದು, ಅಲ್ಲಿನ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಲಕ್ಷಾನುಗಟ್ಟಲೇ ನಿವಾಸಿಗಳ ಮೇಲೆ ನಿಯಂತ್ರಣ ಹೊಂದಿದೆಯಂತೆ. ಈ ಪಕ್ಷವು ಸಾಂವಿಧಾನಿಕ ಹಾಗೂ ಕಾನೂನಾತ್ಮಕ ದಾಖಲೆಗಳನ್ನೂ ಕೂಡಾ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತಂತೆ. ಪರಿಣಾಮ 1991 ರಲ್ಲಿ ಈ ಪಕ್ಷವು ನಿಷೇಧಕ್ಕೊಳಗಾಯಿತು ಎನ್ನಲಾಗಿದೆ.
ಜನವಿರೋಧಿ ನೀತಿ, ಭ್ರಷ್ಟಾಚಾರ, ನಿರಂಕುಶ ಪ್ರಭುತ್ವ ಹಾಗೂ ಎಲ್ಲದಕ್ಕಿಂತಲೂ ಹೆಚ್ಚಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಂಡ ಪಕ್ಷಗಳಿಗೆ ಹೆಚ್ಚು ಆಯುಷ್ಯ ಇಲ್ಲ ಎಂಬುದು ಬಹುಶಃ ಈ ವರದಿಯಿಂದ ತಿಳಿಯಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.