ಲಕ್ನೋ: ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದರಿಂದ ಉತ್ತರಪ್ರದೇಶದ ಮುಸ್ಲಿಂ ಸಮುದಾಯ ಆತಂಕಗೊಂಡಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಬಿಜೆಪಿಯ ಮುಸ್ಲಿಂ ಬೆಂಬಲಿತರು, ಫೈಯರ್ಬ್ರಾಂಡ್ ಸಂತರ ವಿರುದ್ಧ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಯೋಗಿ ಕಠಿಣ ನಿಲುವು ತಳೆದಿರತುವುದರಿಂದ ಅವರನ್ನು ಟಾರ್ಗೆಟ್ ಮಡಲಾಗುತ್ತಿದೆ ಎಂದಿರುವ ಅವರು, ಬಿಎಸ್ಪಿ ಮತ್ತು ಸಮಾಜವಾದಿ ಕೋಮುವಾದಿ ಪಕ್ಷಗಳು. ಕಳೆದ ಹಲವಾರು ವರ್ಷಗಳಿಂದ ಈ ಪಕ್ಷಗಳು ಮುಸ್ಲಿಮರಿಗೆ ವಂಚನೆ ಮಾಡುತ್ತಾ ಬರುತ್ತಿದೆ ಮತ್ತು ಅವರನ್ನು ವೋಟ್ ವ್ಯಾಂಕ್ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಹಿಂದೂವಾದಿಯಾದ ಯೋಗಿಯವರನ್ನು ನೂತನ ಬಿಜೆಪಿ ಸರ್ಕಾರದ ಸಾರಥಿಯನ್ನಾಗಿ ಮಾಡಲಾಗಿದ್ದು, ಇದಕ್ಕೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.
ಆದರೆ ಯೋಗಿ ಉತ್ತಮ, ತಾರತಮ್ಯ ರಹಿತ ಸರ್ಕಾರ ನೀಡುವ ಭರವಸೆ ನೀಡಿದ್ದು, ಉಗ್ರ ಹೇಳಿಕೆಗಳನ್ನು ನೀಡದಂತೆ ತಮ್ಮ ಸಚಿವ, ಶಾಸಕರುಗಳಿಗೆ ಕಿವಿಮಾತು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.