ನವದೆಹಲಿ: ಛತ್ತೀಸ್ಗಢದ ಸುಕ್ಮಾದಲ್ಲಿ ನಕ್ಸಲ್ ದಾಳಿಗೆ ಸಾವನ್ನಪ್ಪಿದ ಸಿಆರ್ಪಿಎಫ್ ಯೋಧರ ಕುಟುಂಬಗಳಿಗೆ ಹಣಕಾಸು ನೆರವು ನೀಡಲು ಖ್ಯಾತ ಬ್ಯಾಡ್ಮಿಂಟನ್ ಆಗಾರ್ತಿ ಸೈನಾ ನೆಹ್ವಾಲ್ ಮುಂದಾಗಿದ್ದಾರೆ.
ಪ್ರತಿ ಕುಟುಂಬಕ್ಕೆ ತಲಾ 50 ಸಾವಿರದಂತೆ ಒಟ್ಟು 6 ಲಕ್ಷ ರೂಪಾಯಿ ನೀಡಲು ಅವರು ನಿರ್ಧರಿಸಿದ್ದಾರೆ. ತನ್ನ ಹುಟ್ಟುಹಬ್ಬದಂದು ಅವರು ಈ ಘೋಷಣೆ ಮಾಡಿದ್ದಾರೆ.
ನನ್ನ ಸಣ್ಣ ಸಹಾಯದಿಂದ ಹುತಾತ್ಮರ ಕುಟುಂಬಕ್ಕೆ ತುಸು ನೆಮ್ಮದಿ ಸಿಗಬಹುದು ಎಂಬ ಆಶಯ ನನ್ನದು ಎಂದು ನೆಹ್ವಾಲ್ ಹೇಳಿದ್ದಾರೆ.
‘ನಮ್ಮನ್ನು ಸುರಕ್ಷಿತವಾಗಿಡಲು ತಮ್ಮ ಪ್ರಾಣವನ್ನೇ ಅಪಾಯಕ್ಕೆ ದೂಡಿದ ಯೋಧರಿಗೆ ನನ್ನ ಹೃದಯ ಮಿಡಿಯುತ್ತಿದೆ. ಛತ್ತೀಸ್ಗಢದಲ್ಲಿ ಹುತಾತ್ಮರಾದ ಯೋಧರನ್ನು ವಾಪಾಸ್ ಕರೆ ತರಲು ನನ್ನಿಂದ ಸಾಧ್ಯವಿಲ್ಲ, ಆದರೆ ಅವರ ಕುಟುಂಬಗಳಿಗೆ ಆರು ಲಕ್ಷ ದಾನ ಮಾಡಲು ಇಚ್ಛಿಸುತ್ತೇನೆ’ ಎಂದಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೂ ತಲಾ ೯ ಲಕ್ಷದಂತೆ ಒಟ್ಟು ೧.೮ ಕೋಟಿ ರೂಪಾಯಿಯನ್ನು ಈ ಕುಟುಂಬಗಳಿಗೆ ದಾನವಾಗಿ ನೀಡಿದ್ದಾರೆ.
ಈ ತಾರೆಯರ ಹೃದಯ ಶ್ರೀಮಂತಿಕೆಗೆ ಭಾರತ ಸೆಲ್ಯೂಟ್ ಹೊಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.