ನವದೆಹಲಿ: ರಿಲಯನ್ಸ್ ಇಂಡ್ರಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅನಾಣ್ಯೀಕರಣ ಮತ್ತು ಡಿಜಿಟಲ್ ಅಭಿಯಾನದ ನಡೆಯನ್ನು ಪ್ರಶಂಸಿಸಿದ್ದಾರೆ.
ಡಿಮಾನಿಟೈಸೇಶನ್ಗೆ ಧನ್ಯವಾದಗಳು. ಭಾರತ ನಗದು ಆರ್ಥಿಕತೆಯಿಂದ ಡಿಜಿಟಲ್ ಸೂಕ್ತ ಆರ್ಥಿಕತೆಯತ್ತ ದಾಪುಗಾಲಿಟ್ಟಿದೆ. ಅದು ನಿರುತ್ಪಾದಕ ನಗದನ್ನು ಉತ್ಪಾದಕ ಹಣವನ್ನಾಗಿ ಪರಿವರ್ತಿಸಿದೆ ಎಂದು ಇಂಡಿಯಾ ಟುಡೇ ಕಾನ್ಕ್ಲೇವ್ನಲ್ಲಿ ಅಂಬಾನಿ ಹೇಳಿದ್ದಾರೆ.
ಭಾರತ ಇಂದು ಮಹಾನ್ ದೇಶವಾಗಿದೆ, ಆದರೆ ಭಾರತ ನಾಳಿನ ಅದ್ಭುತ. ಈವರೆಗೆ ದೇಶದಲ್ಲಿ ಸಾಲ ಅಲ್ಪ ಪ್ರಮಾದಲ್ಲಿದ್ದು, ಹೆಚ್ಚಿನ ಮೌಲ್ಯ ಪಡೆದಿತ್ತು. ಇದು ಕೆಲವೇ ಕೆಲವು ಜನರಿಗೆ ದೊರಕುತ್ತಿತ್ತು. ಮುಂದಿನ ವರ್ಷಗಳಲ್ಲಿ ಆಧಾರ್ ಕಾರ್ಡ್ ಆಧಾರದಲ್ಲಿ ಮೊಬೈಲ್ ಫೋನ್ಗಳ ಮೂಲಕ ಕೆಲವೇ ನಿಮಿಷಗಳಲ್ಲಿ ಸಾಲ ಪಡೆಯಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಉತ್ತರಪ್ರದೇಶದ ಜಯದ ಬಗ್ಗೆ ಹೇಳಿದ ಅವರು, ದೇಶದ ಜನತೆಯನ್ನು ಮಾತ್ರವಲ್ಲ ಇಡೀ ವಿಶ್ವ ಮತ್ತು ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳುವ ನಾಯಕನನ್ನು ಪಡೆದಿರುವುದು ನಮ್ಮ ಅದೃಷ್ಟ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
ಬರಾಕ್ ಒಬಾಮಾ ಅಮೇರಿಕಾ ಅಧ್ಯಕ್ಷರಾಗಿದ್ದ ಸಂದರ್ಭ ಪ್ರಧಾನಿಯವರು ಅಮೇರಿಕಾ ಭೇಟಿ ನೀಡಿದಾಗ ಔತಣಕೂಟದ ವೇಳೆ ತಂತ್ರಜ್ಞಾನ ಹೇಗೆ ದೇಶದ ಅಭಿವೃದ್ಧಿ ಮತ್ತು ಬಡವರಿಗೆ ಸಹಾಯಕವಾಗಬಹುದು ಎಂದು ಚರ್ಚಿಸಿದ್ದು, ಇದರಿಂದ ನಾನು ಹೆಚ್ಚು ಪ್ರಭಾವಿತನಾದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.