ನವದೆಹಲಿ: ಉತ್ತರಪ್ರದೇಶದಲ್ಲಿ ಶೀಘ್ರ ಅಧಿಕಾರದ ಗದ್ದುಗೆ ಏರಲಿರುವ ಬಿಜೆಪಿ ಅಲ್ಲಿರುವ ಎಲ್ಲಾ ಕಸಾಯಿಖಾನೆಗಳನ್ನೂ ಬಂದ್ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಯುಪಿಯಲ್ಲಿನ ಎಲ್ಲಾ ಕಸಾಯಿಖಾನೆಗಳನ್ನು ಮುಚ್ಚುತ್ತೇವೆ ಎಂದು ವಿಧಾನಸಭಾ ಚುನಾವಣೆಗೂ ಮೊದಲು ಜನರಿಗೆ ಭರವಸೆ ನೀಡಿದ್ದೆ, ಇದೀಗ ಅಲ್ಲಿ ರಚನೆಯಾಗಲಿರುವ ಬಿಜೆಪಿ ಸರ್ಕಾರ ಈ ಕಾರ್ಯವನ್ನು ಮಾಡಲಿದೆ’ ಎಂದಿದ್ದಾರೆ.
ಶೀಘ್ರದಲ್ಲೇ ಉತ್ತರಪ್ರದೇಶ ಅಭಿವೃದ್ಧಿ ಹೊಂದಿದ ರಾಜ್ಯಗಳ ಭೂಪಟದಲ್ಲಿ ಸೇರಲಿದೆ. ಈ ರಾಜ್ಯವನ್ನು ಬಿಮಾರು( BIMARU) ರಾಜ್ಯಗಳ ಪಟ್ಟಿಯಿಂದ ಹೊರಗಿಡುವತ್ತ ಕಾರ್ಯೋನ್ಮುಖರಾಗುತ್ತೇವೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದ ನೋಟ್ ಬ್ಯಾನ್ ಎಲ್ಲಾ ರೀತಿಯ ಭ್ರಷ್ಟಚಾರ ಮತ್ತು ಲಂಚಗುಳಿತವನ್ನು ಹೋಗಲಾಡಿಸಲಿದೆ ಎಂದಿರುವ ಅವರು, ನಮ್ಮ ಪಕ್ಷ ರಾಜಕೀಯ ದೇಣಿಗೆಯ ಮಿತಿಯನ್ನು ರೂ.೨೦ ಸಾವಿರದಿಂದ ೨ ಸಾವಿರಕ್ಕೆ ಇಳಿಸಿದೆ. ಶೇ.100ರಷ್ಟು ಡಿಜಿಟಲ್ ದೇಣಿಗೆಯನ್ನು ತಂದಿದ್ದು, ಇನ್ನು ಕೆಲ ವರ್ಷಗಳ ಕಾಲ ನಗದು ರೂಪದಲ್ಲಿ ದೇಣಿಗೆ ನೀಡುವಂತಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.