ಮುಂಬಯಿ: ಭಾರತ ಸರ್ಕಾರ ಎಚ್-೧ಬಿ ವೀಸಾ ಸಮಸ್ಯೆ ಬಗ್ಗೆ ಅಮೇರಿಕಾಕ್ಕೆ ತನ್ನ ಕಾಳಜಿ ವ್ಯಕ್ತಪಡಿಸಿದೆ ಎಂದು ಹೇಳಿರುವ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್, ಅಮೇರಿಕಾದಲ್ಲಿ ಭಾರತೀಯರು ಉದ್ಯೋಗ ಕಸಿದುಕೊಳ್ಳುವಿದಿಲ್ಲ ಬದಲಾಗಿ ಉದ್ಯೋಗ ಸೃಷ್ಟಿಸುತ್ತಾರೆ ಎಂದು ಹೇಳಿದ್ದಾರೆ.
ಭಾರತ ಉನ್ನತ ಮಟ್ಟದಲ್ಲಿ ವೀಸಾ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ. ಭಾರತೀಯ ಕಂಪೆನಿಗಳು ಉದ್ಯೋವನ್ನು ಕದಿಯುವುದಿಲ್ಲ ಎಂದು ಅಮೇರಿಕಾದ ಆಡಳಿತ ತಿಳಿದುಕೊಳ್ಳಬೇಕಿದೆ. ಅವರು ಉತ್ತಮ ಭಾರತ ಮತ್ತು ಉತ್ತಮ ಅಮೇರಿಕಾ ನಿರ್ಮಿಸಲು ಉದ್ಯೋಗ ಸೃಷ್ಟಿ ಮಾಡುತ್ತಾರೆ ಎಂದು ಇಂಡಿಯಾ ಟುಡೇ ಸಮಾರಂಭದಲ್ಲಿ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ವಿಶ್ವದಾದ್ಯಂತ 80 ರಾಷ್ಟ್ರಗಳ 200 ನಗರಗಳಲ್ಲಿ ಭಾರತೀಯ ಐಟಿ ಕಂಪೆನಿಗಳಿದ್ದು, ಭಾರತೀಯ ಐಟಿ ಕಂಪೆನಿಗಳು ವಿಶೇಷವಾಗಿ ಅಮೇರಿಕಾಗೆ ಕಳೆದ 5 ವರ್ಷಗಳಲ್ಲಿ 20 ಬಿಲಿಯನ್ ಡಾಲರ್ ತೆರಿಗೆ ಪಾವತಿಸಿವೆ.
ಡಿಜಿಟಲ್ ಅಭಿಯಾನದ ಕುರಿತು ಮಾತನಾಡಿದ ಅವರು, ಭಾರತದ ಪರಿವರ್ತಕ ಕಾರ್ಯಕ್ರಮಗಳಾದ ಡಿಜಿಟಲ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಕಾರ್ಯಕ್ರಮಗಳಲ್ಲಿ ನವದೆಹಲಿ ಪಾಲ್ಗೊಂಡಿದೆ. ಡಿಜಿಟಲ್ ಇಂಡಿಯಾ ಮಧ್ಯಮ ವರ್ಗದವರಿಗೆ ಹೆಚ್ಚು ಅನಕೂಲಕರವಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.