ಶ್ರೀನಗರ: ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರೀಕೃತ ಸರ್ಕಾರ ರಚಿಸುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು, ಭಾರತವನ್ನು ನೈಜ ಒಕ್ಕೂಟ ವ್ಯವಸ್ಥೆಯನ್ನಾಗಿ ರೂಪಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂಬುದು ಅವರ ಆಡಳಿತ ಕೌಶಲ್ಯದಿಂದಲೇ ತಿಳಿಯುತ್ತಿದೆ ಎಂದಿದ್ದಾರೆ.
2017ರ ಇಂಡಿಯಾ ಟುಡೇ ಕಾನ್ಕ್ಲೇವ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಳಮಟ್ಟದಿಂದ ಬಂದಿರುವ ಮೋದಿ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಸಹಕಾರಿ ಒಕ್ಕೂಟತ್ವದ ಬಗ್ಗೆ ಮಾತನಾಡಿದ ಅವರು, ರಾಜ್ಯ ರಾಜ್ಯಗಳ ನಡುವಿನ ಸ್ಪರ್ಧೆ ಉತ್ತಮವಾದುದು ಆದರೆ ಅದು ಅಭಿವೃದ್ಧಿಯ ಮೇಲಿನ ಸ್ಪರ್ಧೆಯಾಗಿರಬೇಕೇ ಹೊರತು ಪಕ್ಷದ ಮೇಲಿನ ಸ್ಪರ್ಧೆಯಾಗಬಾರದು ಎಂದಿದ್ದಾರೆ.
ಜಮ್ಮು ಕಾಶ್ಮೀರ ಗಡಿ ರಾಜ್ಯ, ನಮ್ಮ ಸಂವೇದನಾ ಶೀಲತೆ ಇತರರಿಗಿಂತ ಭಿನ್ನ. ನಾವು ಎರಡು ದೇಶಗಳ ಗುದ್ದಾಟದ ಸಂತ್ರಸ್ಥರು. ಹೀಗಾಗೀ ನಮ್ಮನ್ನು ಬೇರೆ ರಾಜ್ಯಗಳಿಗಿಂತ ಭಿನ್ನವಾಗಿ ಕಾಣುವ ಅವಶ್ಯಕತೆ ಇದೆ ಎಂದು ಮುಫ್ತಿ ವಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.