ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ದೇವಸ್ಥಾನಗಳ ಪೈಕಿ ’ಎ’ ದರ್ಜೆಯಲ್ಲಿರುವ ದೇವಸ್ಥಾನಗಳ ಆದಾಯ ಕೋಟಿಗೂ ಅಧಿಕವಾಗಿರುತ್ತದೆ. ’ಬಿ’ ದರ್ಜೆಯಲ್ಲಿರುವ ದೇವಸ್ಥಾನಗಳಿಂದ ಸರಕಾರಕ್ಕೆ ಇದೆ. ಅದೇ ಮಾತು ’ಸಿ’ ವರ್ಗದ ಅಧಿಸೂಚಿತ ಸಂಸ್ಥೆಗಳಿಗೆ ಆದಾಯ ಮೂಲವೂ ಇಲ್ಲ, ಬರೀ ಮಂಗಳಾರತಿ ತಟ್ಟೆಯಲ್ಲಿಯ ಆದಾಯವನ್ನೂ ಸಹ ತೋರಿಸಬೇಕಾದ ದೇವಸ್ಥಾನಗಳ ಪರಿಸ್ಥಿತಿ ವಿಭಿನ್ನವಾಗಿದೆ.
ಈ ಮಾತು ಏಕೆಂದರೆ 12ನೇ ಬಾರಿಗೆ ದಾಖಲೆ ಬಜೆಟ್ ಮಂಡಿಸಿದ ಹಣಕಾಸು ಖಾತೆಯನ್ನೂ ಹೊಂದಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಳೆದ ಬಾರಿಯಂತೆ ಈ ಬಾರಿಯು ಮುಜರಾಯಿ ಇಲಾಖೆಗೆ ಅನುದಾನ ನೀಡಿಲ್ಲ. ಸರಕಾರಕ್ಕೆ ಮುಜರಾಯಿ ಧಾರ್ಮಿಕ ಕ್ಷೇತ್ರಗಳ ಬಗ್ಗೆ ತಾತ್ಸಾರಭಾವನೆ ಏಕೆ ಎಂಬ ಪ್ರಶ್ನೆ ಮೂಡುತ್ತದೆ.
ಕೆಲ ತಿಂಗಳುಗಳ ಹಿಂದೆ ಮುಜರಾಯಿ ಸಚಿವರಾದ ರುದ್ರಪ್ಪ ಲಮಾಣಿಯವರು ಈ ವರ್ಷದ ಬಜೆಟ್ನಲ್ಲಿ ಇಲಾಖೆಗೆ ರೂ. 100ಕೋಟಿ ಅನುದಾನವನ್ನು ನೀಡುವಂತೆ ಮುಖ್ಯಮಂತ್ರಿಯವರಿಗೆ ಬೇಡಿಕೆ ಮನವಿ ಸಲ್ಲಿಸಲಾಗಿದೆ ಎಂದು ಕಾರ್ಯಕ್ರಮದಲ್ಲಿ ವಿವರಿಸಿದ್ದರು.
ಸಚಿವರ ಬೇಡಿಕೆಯ ಭರವಸೆ ಈಡೇರಿಲ್ಲವೆಂದ ಮೇಲೆ ಮಠ-ಮಾನ್ಯ, ದೇಗುಲಗಳ ಮನವಿಯನ್ನು ಸರಕಾರವು ವೈಯುಕ್ತಿಕವಾಗಿ ಪುರಸ್ಕರಿಸುವುದೇ ಎಂಬ ಅನುಮಾನ ಮೂಡತೊಡಗಿದೆ. ರಾಜಕೀಯ ಗಿಮಿಕ್ಗೆ ಸಂಪ್ರದಾಯದಂತೆ ಮುಂದಿನ ಚುನಾವಣಾ ಕಣದ ಅನುಕೂಲಕ್ಕಾಗಿ ಜನಪರ ಬಜೆಟ್ ಮಂಡಿಸುವುದು ರಾಜಕೀಯರಂಗದವರ ಲೋಕಾರೂಢಿ.
ಈ ಹಿಂದಿನ ಬಜೆಟ್ಗಳಲ್ಲಿ ಮಠ-ಮಾನ್ಯ ದೇಗುಲಗಳಿಗೆ ದೇವರಿಗೆ ಇಂತಿಷ್ಟು ’ಮೀಸಲು’ ಎಂದು ಮುಜರಾಯಿಗೆ ವಿಶೇಷ ಸ್ಥಾನ ನೀಡಲಾಗುತ್ತಿತ್ತು. ಆದರೆ ಮುಜರಾಯಿ ಇಲಾಖೆ ಅಧಿಸೂಚಿತ ಸಂಸ್ಥೆಯಲ್ಲಿರುವ ದೇವಾಲಯಗಳ ಆದಾಯ-ತೆರಿಗೆ ಮಾತ್ರ ಸರಕಾರಕ್ಕೆ ಬೇಕು, ಮಠ ಮಂದಿರಗಳಿಗೆ ಬಿಡಿಗಾಸು ಕೊಟ್ಟಿಲ್ಲ. ಹಿತಾಸಕ್ತಿ ಏಕೆ ಬೇಡ, ಧಾರ್ಮಿಕ ಕ್ಷೇತ್ರದ ಪುನರುಜ್ಜೀವನ, ಮೂಲ ಸೌಕರ್ಯಕ್ಕೆ ವಿಶೇಷ ಅನುದಾನ ತೆಗೆದಿಡಲಾಗಿದೆಯೇ ಎಂಬುದಕ್ಕೆ ಈ ಬಾರಿ ಬಜೆಟ್ ಅವಕಾಶವನ್ನೇ ನೀಡಿಲ್ಲ. ಮುಜರಾಯಿ ಸಚಿವರೇಕೇ ಬೇಕು. ಇಲಾಖೆಯನ್ನು ಬೇರೆ ಇಲಾಖೆಯಲ್ಲಿ ವಿಲೀನಗೊಳಿಸುವಂತೆ ಎಲ್ಲರೂ ಒತ್ತಾಯಿಸುವ ಕಾಲ ಬಂದಿತು..
ಮುಜರಾಯಿ ಇಲಾಖೆ ಅಂತರ್ಜಾಲದಲ್ಲಿ ಹುಡುಕಿದರೂ ಸಿಗುವುದಿಲ್ಲ. ಮುಜರಾಯಿ ಇಲಾಖೆಯು ಕಂದಾಯ,ಧಾರ್ಮಿಕ ದತ್ತಿಯಿಂದ ಟಿಸಿಲೊಡೆದ ಪ್ರತ್ಯೇಕ ಇಲಾಖೆ ಆಗಿ ಬಹಳ ವರ್ಷಗಳಾದರೂ ಮುಜರಾಯಿ ಇಲಾಖೆಯ ಅಧಿಕೃತ ವೆಬ್ಸೈಟ್ ಇನ್ನೂವರೆಗೂ ಒದಗಿಸಿಲ್ಲ.
ಸಾಪ್ಟ್ಟವೇರ್ ಅಳವಡಿಸಿ ಇಲಾಖೆ ಅಧೀನಕ್ಕೆ ಒಳಪಡುವ ಸ್ಥಳದಿಂದ ದೇವಸ್ಥಾನಕ್ಕಿರುವ ದೂರ, ಅಲ್ಲಿಗೆ ಹೋಗಲು ಲಭ್ಯ ಇರುವ ವಾಹನ ಸೌಲಭ್ಯ, ದೇವಸ್ಥಾನ ಜತೆಗೆ ಸುತ್ತಮುತ್ತಲ ಪ್ರದೇಶದಲ್ಲಿ ಲಭ್ಯವಾಗುವ ವಸತಿ ಸೌಕರ್ಯ ಹೀಗೆ ಹತ್ತು ಹಲವು ಮಾಹಿತಿಗಳು ಕ್ಷಣಮಾತ್ರದಲ್ಲಿ ಮಾಹಿತಿಯನ್ನು ಕ್ಷಣಮಾತ್ರದಲ್ಲೇ ಯಾತ್ರಾರ್ಥಿಗಳಿಗೆ ಹೊಸವರ್ಷದೊಳಗೆ ಒದಗಿಸಲಾಗುವುದು ಎಂದು ಸಚಿವರು ಹೇಳಿದ್ದರು. ಇನ್ನೂ ಆಗಿಲ್ಲ ಬಹುಶಃ ಯುಗಾದಿಗೆ ನೀಡುತ್ತಾರೋ ನೋಡಬೇಕು.
ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ದೇವಸ್ಥಾನಗಳ ಪೈಕಿ ’ಎ’ ದರ್ಜೆಯಲ್ಲಿರುವ ದೇವಸ್ಥಾನಗಳ ಆದಾಯ ಕೋಟಿಗೂ ಅಧಿಕವಾಗಿರುತ್ತದೆ. ಇಲ್ಲಿಗೆ ಬರುವ ಭಕ್ತರ ಸಂಖ್ಯೆಯೂ ಲಕ್ಷಾಂತರ. ಈ ಕಾರಣಕ್ಕೆ ನಿತ್ಯ ದಾಸೋಹ ಸೌಲಭ್ಯವಿಲ್ಲದ ಕಡೆಗೆ ಅನ್ನಛತ್ರ, ವಸತಿ ಸೌಲಭ್ಯವಿಲ್ಲದಿದ್ದಲ್ಲಿ ವಸತಿ ಸಮುಚ್ಛಯ ಆರಂಭಿಸುವ ಉದ್ದೇಶ ಹೊಂದಿದ್ದು. ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಉಸ್ತುವಾರಿಯಲ್ಲಿ ದೇವಸ್ಥಾನದಲ್ಲಿ ಲಭ್ಯ ಇರುವ ನೂರಾರು ಕೋಟಿ ರೂ. ಆದಾಯವನ್ನು ಭಕ್ತರ ಸೌಲಭ್ಯಕ್ಕೆ ಬಳಸಿಕೊಳ್ಳುವ ಚಿಂತನೆಯಲ್ಲಿದೆ ಎಂದು ಪತ್ರಿಕಾ ವರದಿಯಲ್ಲಿ ಹೇಳಲಾಗಿತ್ತು. ಸರಕಾರದ ಕೊಡುಗೆ ಇಲ್ಲದೇ ’ಮುಜರಾಯಿ ಮಡಿಕೆಯಲ್ಲಿನ ಬೆಣ್ಣೆಯನ್ನೇ ಸರಕಾರ ಬಳಿದುಕೊಂಡು ಅಭಿವೃದ್ಧಿಪಡಿಸುತ್ತಿದೆ.’
ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ಎಲ್ಲ ದೇವಸ್ಥಾನಗಳ ಪೂಜಾರಿಗಳಿಗೆ ಅರ್ಚಕರಿಗೆ ಅಡುಗೆ ತಯಾರಕರೂ ಸೇರಿದಂತೆ ಎಲ್ಲ ಕೆಲಸಗಾರರಿಗೂ ದೇವಸ್ಥಾನಗಳ ದರ್ಜೆಗನುಗುಣವಾಗಿ ವೇತನ ನೀಡುವ ಉದ್ದೇಶಕ್ಕೆ ಆಡಳಿತಾತ್ಮಕ ಅನುಮೋದನೆಗೆ ಸಲ್ಲಿಕೆಯಾಗಿದ್ದರೂ ಅಲ್ಲಿಯೇ ಇದೆ.
ಎಲ್ಲ ಇಲಾಖೆಗಳಲ್ಲೂ ಇರುವಂತೆ ಮುಜರಾಯಿ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಲ್ಲಿಸುವುದೂ ಸೇರಿದಂತೆ ಕಾಮಗಾರಿಗೆ ಅನ್ಯ ಇಲಾಖೆಗಳ ತಾಂತ್ರಿಕ ಪರಿಣಿತರನ್ನೇ ಅವಲಂಬಿಸಬೇಕಿದೆ. ಈ ಕಾರಣಕ್ಕೆ ತಾಂತ್ರಿಕ ವಿಭಾಗ ಆರಂಭಿಸಿ, ಎಂಜಿನಿಯರ್ ಅವರನ್ನು ನೇಮಿಸಿಕೊಂಡಲ್ಲಿ ಅನುದಾನ ಉಳಿತಾಯ ಸಾಧ್ಯವಾಗಲಿದೆ ಎನ್ನುವುದು ಗೊತ್ತಿದ್ದರೂ ಸರಕಾರ ಕಾಂiiಪ್ರವೃತ್ತವಾಗಿಲ್ಲ.
-ಹನುಮಂತ.ಮ.ದೇಶಕುಲಕರ್ಣಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.