ಲಕ್ನೋ: ಉತ್ತರಪ್ರದೇಶ ಸೋಲಿನ ಆಘಾತದಿಂದ ಹೊರಬರಲಾಗದೆ ಒದ್ದಾಡುತ್ತಿರುವ ಬಿಎಸ್ಪಿ ಅಧಿನಾಯಕಿ ಮಾಯಾವತಿ ಅವರು ತನ್ನೆಲ್ಲಾ ಆಕ್ರೋಶವನ್ನು ಬಿಜೆಪಿ ಮತ್ತು ಮತಯಂತ್ರದ ವಿರುದ್ಧ ತೋರಿಸುತ್ತಿದ್ದಾರೆ.
ಬಿಜೆಪಿ ಮತಯಂತ್ರದಲ್ಲಿ ತಿದ್ದುಪಡಿ ತಂದು ಎಲ್ಲಾ ಮತಗಳು ತನಗೆ ಬೀಳುವಂತೆ ಮಾಡಿದೆ ಎಂದು ಆರೋಪಿಸುತ್ತಿರುವ ಅವರು, ಇದೀಗ ಪ್ರತಿ ತಿಂಗಳು 11ನೇ ತಾರೀಖಿನಂದು ಕಪ್ಪುದಿನವನ್ನು ಆಚರಿಸುವುದಾಗಿ ಘೋಷಿಸಿದ್ದಾರೆ. ಯುಪಿ ವಿಧಾನಸಭೆಯ ಫಲಿತಾಂಶ ಮಾ.11ಕ್ಕೆ ಪ್ರಕಟಗೊಂಡಿತ್ತು.
ಮುಸ್ಲಿಂ ಮತ್ತು ದಲಿತ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿದೆ. ಬಿಜೆಪಿ ಮತಯಂತ್ರದಲ್ಲಿ ವಂಚನೆ ಮಾಡಿದೆ ಎಂಬುದು ಇದರಿಂದಲೇ ಸಾಬೀತಾಗುತ್ತದೆ. ಒಂದೋ ಬೇರೆ ಪಕ್ಷಗಳಿಗೆ ಒತ್ತಿದ ಮತವನ್ನು ಮತಯಂತ್ರ ಸ್ವೀಕರಿಸಿಲ್ಲ ಅಥವಾ ಒತ್ತಿದ್ದೆಲ್ಲವೂ ಬಿಜೆಪಿಗೆ ಹೋಗಿ ಬಿದ್ದಿದೆ ಎಂದು ಅವರು ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.