ನವದೆಹಲಿ: ಈ ಬಾರಿಯ ಮಹಿಳಾ ದಿನದ ಭಾಗವಾಗಿ ನೀತಿ ಆಯೋಗ ವಿವಿಧ ಸ್ಪರ್ಧೆಯನ್ನು ಏರ್ಪಡಿಸಿದೆ. ಇದು ‘ಬದಲಾಗುತ್ತಿರುವ ಜಗತ್ತಿನಲ್ಲಿ ಮಹಿಳೆಯರು: ಪ್ಲಾನೆಟ್ 50 50 ಬೈ 2030’ನ್ನು ಕೇಂದ್ರೀಕರಿಸಿದೆ.
ಕೇಂದ್ರ ಸರ್ಕಾರದ ಲಿಂಗ ಸಮಾನತೆ ಖಚಿತಪಡಿಸಿಕೊಳ್ಳುವ ಬದ್ಧತೆಯೊಂದಿಗೆ ನೀತಿ ಆಯೋಗ ದೇಶವನ್ನು ರೂಪಾಂತರಗೊಳಿಸುವ ಮಹಿಳೆಯರ ಬಗ್ಗೆ ಆನ್ಲೈನ್ ಪ್ರಬಂಧ ಸ್ಪರ್ಧೆ ‘ವುಮೆನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ’ ಆಯೋಜಿಸಿದೆ.
ಸ್ಪರ್ಧಾಳುಗಳು ಹಳೆಯ ಕಟ್ಟುಪಾಡುಗಳನ್ನು ಮುರಿದು ರೂಪಾಂತರಕ್ಕೆ ಕಾರಣವಾದ ಮಹಿಳೆಯರ ಬಗ್ಗೆ ಚಿತ್ರಿಸಲಾದ ವೀಡಿಯೋ ಅಥವಾ ಫೋಟೋಗಳನ್ನು ಮಹಿಳೆಯರ ಕುರಿತ ಕಿರುಶೀರ್ಷಿಕೆಯೊಂದಿಗೆ (50 ಪದಗಳು) ಕಳುಹಿಸಬೇಕಿದೆ. ಮನೆಯಲ್ಲೇ ಮೊಬೈಲ್ ಫೋನ್ ಮೂಲಕ ತೆಗೆಯಲಾದ ಫೋಟೋ, ವೀಡಿಯೋಗಳಿಗೂ ಅವಕಾಶವಿದೆ.
ಅಲ್ಲದೇ ಸ್ಪರ್ಧಾಳುಗಳು ಮಹಿಳೆಯರ ಶೈಕ್ಷಣಿಕ ವಿದ್ಯಾರ್ಹತೆಯನ್ನು ಲೆಕ್ಕಿಸದೇ, ಅವರ ಕಾರ್ಯಕ್ಷೇತ್ರದ ಬಗ್ಗೆ ಪ್ರಬಂಧವನ್ನೂ ಬರೆದು ಕಳುಹಿಸಬಹುದಾಗಿದೆ. ಸಾಂಪ್ರದಾಯಿಕ ಉದ್ಯೋಗಗಳನ್ನು ಹೊರತುಪಡಿಸಿ, ತಮ್ಮ ನೆರೆಯ, ಸಮಾಜದ ಇತರ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುವ ಮಹಿಳೆಯರ ಬಗ್ಗೆ ಬರೆದ ಪ್ರಬಂಧಗಳನ್ನು (500 ಪದಗಳು ಮೀರದಂತೆ) ಪ್ರೋತ್ಸಾಹಿಸಲಾಗುವುದು ಎಂದು ನೀತಿ ಆಯೋಗ ತಿಳಿಸಿದೆ.
ಭಾಗವಹಿಸುವ ಸ್ಪರ್ಧಿಗಳು ಮೇ 1, 2017ರ ಒಳೆಗೆ MyGov.in ವೇದಿಕೆಯಲ್ಲಿ ನೇರವಾಗಿ ಫೋಟೋ, ವೀಡಿಯೋಗಳನ್ನು ನಮೂದಿಸುವಂತೆ ಅದು ತಿಳಿಸಿದೆ.
ಹೆಚ್ಚಿನ ವಿವರಗಳಿಗೆ https://static.mygov.in/rest/s3fs-public/mygov_14889680219017401.pdf ನೋಡಿ.
2016ರಲ್ಲಿ ನೀತಿ ಆಯೋಗ ಯುನೈಟೆಡ್ ನೇಶನ್ಸ್ ಇಂಡಿಯಾ ಹಾಗೂ MyGov ಸಹಭಾಗಿತ್ವದಲ್ಲಿ ಮೊದಲ ಬಾರಿ ‘ವುಮೆನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ’ ಅಭಿಯಾನವನ್ನು ಆಯೋಜಿಸಿತ್ತು.
ಈ ಸ್ಫರ್ಧೆಯ ಮೂಲಕ ನೀತಿ ಆಯೋಗ ಯುನೈಟೆಡ್ ನೇಶನ್ಸ್ ಇಂಡಿಯಾ ಹಾಗೂ MyGov ಸಹಭಾಗಿತ್ವದಲ್ಲಿ ಭಾರತದಾದ್ಯಂತ ಸ್ಫೂರ್ತಿದಾಯಕ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.