ಹೊಸದಿಲ್ಲಿ: ರಾಷ್ಟ್ರೀಯ ಔಷಧಿ ಬೆಲೆನಿಗದಿ ಪ್ರಾಧಿಕಾರ(ಎನ್ಪಿಪಿಎ)ವು ಇತ್ತೀಚೆಗೆ ಔಷಧಿಗಳ ಹೊಸ ಬೆಲೆಯ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಡಯಾಬಿಟಿಸ್, ಕ್ಷಯ ಮಲೇರಿಯ ಹಾಗೂ ರೋಗ ನಿರೋಧಕ ಔಷಧಗಳ ಬೆಲೆಗಳಲ್ಲಿ ಇಳಿಕೆ ಮಾಡುವ ಸೂಚನೆ ನೀಡಿದೆ.
ಈ ಔಷಧಿಗಳ ಬೆಲೆ ಶೇ.25ರಿಂದ 30ರಷ್ಟು ಅಗ್ಗವಾಗುವ ಸಂಭವವಿದೆ. ಉಳಿದ ಔಷಧಿಗಳ ಬೆಲೆಯಲ್ಲಿ ಶೇ.50ರಷ್ಟು ಕಡಿತಗೊಳ್ಳುವ ಸಾಧ್ಯತೆ ಇದೆ.
ಪ್ರಾಧಿಕಾರವು ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಬೆಲೆಯನ್ನು ಅನ್ವಯಿಸಿದಲ್ಲಿ, ಅಂತಹ ಔಷಧಿಗಳನ್ನು ಮಾರುವ ಕಂಪಪೆನಿಗಳು ನಿಗದಿತ ಬೆಲೆ ಅಥವಾ ಕಡಿಮೆ ಬೆಲೆಯನ್ನೇ ಪಡೆಯಬೇಕೆಂದು ಆದೇಶಿಸಿದೆ. ಒಂದು ವೇಳೆ ಈ ಔಷಧಿಗಳನ್ನು ಪ್ಯಾಕಿಂಗ್, ಡೋಸೇಜ್ ಪ್ರಮಾಣದಲ್ಲಿ ಬದಲಾವಣೆ ಮಾಡಿದಲ್ಲಿ ಸರಕಾರದ ಅನುಮತಿ ಪಡೆಯುವಂತೆ ಸೂಚಿಸಿದೆ. ಎನ್ಪಿಪಿಎ 348 ಔಷಧಿಗಳ ಬೆಲೆಯನ್ನು ನೇರವಾಗಿ ನಿಯಂತ್ರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.