ನವದೆಹಲಿ: 5 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ಸಾಧಿಸಿದ ಹಿನ್ನಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಚೇತರಿಕೆ ಕಾಣಿಸಿಕೊಂಡಿದೆ.
ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 29,561.93ರ ಮೂಲಕ 616 ಅಂಕಗಳ ದಾಖಲೆ ಪ್ರಮಾಣದ ಏರಿಕೆಯನ್ನು ಕಂಡಿದೆ. ನಿಫ್ಟಿ 9,122.75 ಅಂಕಗಳ ಹೊಸ ಉತ್ತುಂಗವನ್ನು ಏರಿದೆ.
ಮಾ.11ರಂದು ಫಲಿತಾಂಶ ಪ್ರಕಟಗೊಂಡಿದ್ದರೂ ಅದರ ಪರಿಣಾಮ ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಹೋಳಿ ಹಿನ್ನಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಅಕೌಂಟ್ ಕ್ಲೋಸ್ ಮಾಡಿತ್ತು.
ಶೇ.2.20ರಷ್ಟು ಗಳಿಕೆಯ ಮೂಲಕ ಬ್ಯಾಂಕ್, ಬಂಡವಾಳ ಸರಕು, ಸ್ಥಿರಾಸ್ಥಿ ನೇತೃತ್ವ ಎಲ್ಲಾ ವಲಯದಲ್ಲೂ ಸಕಾರಾತ್ಮಕತೆ ಕಾಣಿಸಿಕೊಂಡಿದೆ.
ರೂಪಾಯಿ ಮೌಲ್ಯವೂ 43 ಪೈಸೆಗಳಷ್ಟು ಏರಿಕೆ ಕಂಡಿದ್ದು, ಡಾಲರ್ ಮುಂದೆ ರೂಪಾಯಿ ಮೌಲ್ಯ 66.47ರಷ್ಟಾಗಿದೆ.
ಬಿಜೆಪಿಯ ಗೆಲುವು ಬಲಿಷ್ಠ ಮತ್ತು ಸ್ಥಿರ ಸರ್ಕಾರದ ಭರವಸೆಯನ್ನು ನೀಡಿದ ಹಿನ್ನಲೆಯಲ್ಲಿ ಬಂಡವಾಳದ ಒಳಹರಿವಿನಲ್ಲಿ ಭಾರೀ ಏರಿಕೆಯಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.