ನವದೆಹಲಿ: ದೇಶದಾದ್ಯಂತ ಬಣ್ಣಗಳ ಹಬ್ಬ ಹೋಳಿಯನ್ನು ಅತೀ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಈ ಶುಭ ವೇಳೆಯಲ್ಲಿ ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಟ್ವಿಟ್ ಮಾಡಿರುವ ಅವರು, ’ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು. ಈ ಹಬ್ಬ ಎಲ್ಲೆಡೆಯು ಸಂತೋಷ, ಸಂಭ್ರಮವನ್ನು ಪಸರಿಸಲಿ’ ಎಂದಿದ್ದಾರೆ.
ಪ್ರತಿವರ್ಷ ಸುಗ್ಗಿ ತಿಂಗಳ ಅಂತ್ಯದಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಭಾರೀ ಸಂಭ್ರಮದಿಂದ ಆಚರಿಸಲ್ಪಡುವ ಈ ಹಬ್ಬ ಇದೀಗ ದಕ್ಷಿಣ ಭಾರತದಲ್ಲೂ ಜನರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಿದೆ.
होली के पावन पर्व की सभी को हार्दिक शुभकामनाएं। Greetings on the festival of colours, Holi. May the festival spread joy & warmth everywhere.
— Narendra Modi (@narendramodi) March 13, 2017
ಬಣ್ಣಗಳನ್ನು ಎರಚಾಡುವ ಮೂಲಕ, ಕಾಮದಹನವನ್ನು ಮಾಡುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಹೋಳಿ ಹಬ್ಬದ ಸಂಭ್ರಮದ ಸಂದರ್ಭದಲ್ಲೇ ಮೋದಿಯವರು ‘ಐಆಮ್ನ್ಯೂಇಂಡಿಯಾ’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.