ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಾತೃತ್ವ ಅನುಕೂಲ(ತಿದ್ದುಪಡಿ) ಮಸೂದೆ, 2016ನ್ನು ಜಾರಿಗೆ ತಂದಿದ್ದು, ಈ ಮೂಲಕ ಉದ್ಯೋಗಸ್ಥ ಮಹಿಳೆಯರಿಗೆ ಮಾತೃತ್ವದ ಕರ್ತವ್ಯ ಪಾಲಿಸಲು ಅನುಕೂಲ ಮಾಡಿಕೊಟ್ಟಿದೆ.
ಈ ಮಸೂದೆ ಜಾರಿಯಿಂದ 12 ವಾರಗಳವರೆಗೆ ಇದ್ದ ಸಂಬಳ ಸಹಿತ ಮಾತೃತ್ವ ರಜೆ 26 ವಾರಗಳಿಗೆ ಏರಿಕೆಯಾಗಿದೆ. ಈ ಮಸೂದೆಯಿಂದ ದೇಶದಾದ್ಯಂತ ಇರುವ 1.5 ಮಿಲಿಯನ್ ಮಹಿಳೆಯರಿಗೆ ಅನುಕೂಲವಾಗಲಿದೆ.
3 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ದತ್ತು ಪಡೆದುಕೊಳ್ಳುವ ತಾಯಿಗೂ ಈ ಮಸೂದೆ 12 ವಾರಗಳ ರಜೆಯನ್ನು ನೀಡಿದೆ.
10 ಉದ್ಯೋಗಿಗಳಿಗಿಂತ ಹೆಚ್ಚು ಮಂದಿಯನ್ನು ಹೊಂದಿರುವ ಸಂಸ್ಥೆಗಳಿಗೆ ಈ ಮಸೂದೆಯ ನಿಯಮಗಳು ಅನ್ವಯವಾಗಲಿದೆ. ಅಲ್ಲದೇ ಎರಡು ಮಕ್ಕಳವರೆಗೆ ಮಾತ್ರ ಈ ಅನುಕೂಲಗಳಿರಲಿವೆ. 3ನೇ ಮಗುವಿಗೆ ಕೇವಲ 12 ವಾರಗಳ ರಜೆಯಷ್ಟೇ ಇರಲಿದೆ.
ಮಗುವಿನ ಜನನವಾದ ತಕ್ಷಣದಿಂದ ಮಾತೃತ್ವದ ರಜೆ ಆರಂಭಗೊಳ್ಳುತ್ತದೆ.
ಕೆನಡ ಮತ್ತು ನಾರ್ವೆಯ ಬಳಿಕ ಇದೀಗ ಅತೀ ಹೆಚ್ಚು ಮಾತೃತ್ವ ರಜೆ ನೀಡುವ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಕೆನಡದಲ್ಲಿ 50 ವಾರಗಳ ಮತ್ತು ನಾರ್ವೆಯಲ್ಲಿ 44 ವಾರಗಳ ಮಾತೃತ್ವ ರಜೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.