ಕಾಸರಗೋಡು: “ಹವ್ಯಕ”ವೆಂದರೆ ಕನ್ನಡ ನಾಡಿನ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ. ಹವ್ಯಕರ ಆಡುಭಾಷೆ “ಹವ್ಯಕ ಭಾಷೆ”, ಅಥವಾ ಹವಿಗನ್ನಡ. ಮಧ್ಯಕಾಲೀನ ಹಳೆಗನ್ನಡ ಭಾಷೆಗೆ ಹತ್ತಿರವಾದ ಈ ಹವಿಗನ್ನಡ – ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ.
ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲಿ ಒಪ್ಪಣ್ಣನ ನೆರೆಕರೆ http://oppanna.com ಎಂಬ ಹವ್ಯಕ ವೆಬ್-ಸೈಟ್ ಕಳೆದ ಒಂಭತ್ತು ವರುಷಗಳಿಂದ ತನ್ನ ಸಾಹಿತ್ಯ ಕೃಷಿಯನ್ನು ಮಾಡುತ್ತಿದೆ. ಸಾಹಿತಿ-ಚಿಂತಕ-ಬರಹಗಾರರ Oppanna.com ಬಳಗವು ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ಎಂಬ ಹೆಸರಿನಲ್ಲಿ ನೋಂದಾವಣೆಗೊಂಡು ಮಾನ್ಯತೆ ಪಡೆದ ಸಂಸ್ಥೆಯಾಗಿದೆ.
ಈಗಾಗಲೇ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ಕಡೆಗಿನ ಕೊಡುಗೆ ಮತ್ತು ಸಾಮಾಜಿಕ- ಸಾಂಸ್ಕೃತಿಕ ಕಾರ್ಯಗಳ ಮೂಲಕ ಪ್ರತಿಷ್ಠಾನವು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಕಳೆದ ಐದು ವರ್ಷಗಳಿಂದ ಸೌರ ಯುಗಾದಿಗೆ ಸಂಪೂರ್ಣ ಹವಿಗನ್ನಡದಲ್ಲೇ ಆಯೋಜನೆ ಆದ ವಿಷು ವಿಶೇಷ ಸ್ಪರ್ಧೆಯು ಹವ್ಯಕ ಸಾಹಿತ್ಯ ಲೋಕಕ್ಕೆ ಹೊಸ ಸಂಚಲನ ನೀಡಿದೆ.
ಈ ವರ್ಷ ಪ್ರತಿಷ್ಠಾನವು ಯುಗಾದಿಯ ಪರ್ವಕಾಲದಲ್ಲಿ ಹೊಸ ಸಾಹಿತಿಗಳ ಅನ್ವೇಷಣೆಗಾಗಿ “ವಿಷು ವಿಶೇಷ ಸ್ಪರ್ಧೆ – 2017” ಆಯೋಜನೆಗೊಳಿಸಿದೆ.
ವಿಷು ವಿಶೇಷ ಸ್ಪರ್ಧೆ – 2017 ವಿವರಗಳು:
1. ಪ್ರಬಂಧ:
ವಿಷಯ : “ಪ್ರಸ್ತುತ ಸಾಮಾಜಿಕ ಮತ್ತು ಕೌಟುಂಬಿಕ ಜೀವನದಲ್ಲಿ ಹಿರಿತನದ ನಿರ್ವಹಣೆ ”
750 ಶಬ್ದಗಳಿಗೆ ಸೀಮಿತಗೊಳಿಸಿ
2. ಕಥೆ :
ವ್ಯಾಪ್ತಿ: ಕುಟುಂಬ ಹಾಗೂ ಮಾನವೀಯ ಮೌಲ್ಯಗಳು (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)
1000 ಶಬ್ದಗಳಿಗೆ ಸೀಮಿತಗೊಳಿಸಿ
3. ಕವಿತೆ:
ವಿಷಯ: ಗೋವು ಮತ್ತು ನಾವು
30 ಸಾಲುಗಳಿಗೆ ಮಿತಿಗೊಳಿಸಿ.
ಛಂದೋಬದ್ಧವಾದ ಕವಿತೆಗಳಿಗೆ ಹೆಚ್ಚಿನ ಆದ್ಯತೆ.
4. ನಗೆಬರಹ:
ಸದಭಿರುಚಿಯ ಲಘುಬರಹ ಈ ವಿಭಾಗಕ್ಕೆ ಬರಲಿ. (ಅಪಹಾಸ್ಯ, ಅಶ್ಲೀಲತೆಗಳು ಬೇಡ)
500 ಶಬ್ದಗಳಿಗೆ ಮಿತಿಗೊಳಿಸಿ.
ನಿಯಮಗಳು:
1. ಎಲ್ಲಾ ಬರಹಗಳೂ ಕಡ್ಡಾಯವಾಗಿ ಹವ್ಯಕಭಾಷೆ- ಕನ್ನಡಲಿಪಿಯಲ್ಲಿ ಇರಬೇಕು.
2. ಹವ್ಯಕ ಪರಂಪರೆ – ಸಂಸ್ಕೃತಿಯ ಹಿರಿಮೆಗಳ ಬಿಂಬಿಸುವ ಬರಹಗಳಿಗೆ ಆದ್ಯತೆ.
3. ಸ್ಪರ್ಧೆಗೆ ಬರುವ ಯಾವುದೇ ಬರಹ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿರಬಾರದು.
4. ಸ್ಪರ್ಧೆಗೆ ಬಂದ ಎಲ್ಲಾ ಬರಹಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ದ್ದೇ ಆಗಿರುತ್ತದೆ.
5. ಸ್ಪರ್ಧೆಯ ವಿಚಾರದಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮ.
6. ಪ್ರತಿ ವಿಭಾಗದಲ್ಲಿಯೂ ಪ್ರಥಮ ಮತ್ತು ದ್ವಿತೀಯ ಎರಡು ಬಹುಮಾನಗಳು ಇರುತ್ತವೆ. ಸೂಕ್ತ ಸಂದರ್ಭದಲ್ಲಿ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುವುದು.
7. ವಿಷು ವಿಶೇಷ ಸ್ಪರ್ಧೆ – 2016 ರಲ್ಲಿ ಭಾಗವಹಿಸಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಪಡೆದವರು ಈ ಬಾರಿ ಸ್ಪರ್ಧೆಯ ಅದೇ ವಿಭಾಗದಲ್ಲಿ ಭಾಗವಹಿಸುವಂತಿಲ್ಲ.
8. ಬಹುಮಾನ ವಿಜೇತರ ವಿವರಗಳನ್ನು ವಿಷುವಿನಂದು (14-04-2017ರಂದು) http://oppanna.com ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.
9. ಹಸ್ತಪ್ರತಿಗಳನ್ನು ಕಳುಹಿಸುವುದಾದರೆ ಕಡ್ಡಾಯವಾಗಿ ಎ4 ಹಾಳೆಯಲ್ಲಿಯೇ ಬರೆದಿರಬೇಕು.
10. ಭಾಗವಹಿಸಲು ಕೊನೆಯ ದಿನಾಂಕ 15.03.2017
ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಗಳನ್ನು ಕಡ್ಡಾಯವಾಗಿ ಪ್ರತ್ಯೇಕ ಹಾಳೆಯಲ್ಲಿ ಬರೆದು ನಿಮ್ಮ ಬರಹದ ಜೊತೆಗೆ ಈ ವಿಳಾಸಕ್ಕೆ ಕಳುಹಿಸಿಕೊಡಬಹುದು.
ಅಂಚೆ ವಿಳಾಸ:
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
C/O ಶ್ರೀಕರ ಅಸೋಸಿಯೇಟ್ಸ್
ಪ್ರಥಮ ಮಹಡಿ, ಕಲ್ಪತರು ಸಂಕೀರ್ಣ
ಗಾಂಧಿ ನಗರ, ಸುಳ್ಯ – 574239
ಮಿಂಚಂಚೆ ವಿಳಾಸ: editor@oppanna.com
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ:
ಮಂಗಳೂರು – 9901200134 / 9449806563
ಕಾಸರಗೋಡು – 08547245304
ಬೆಂಗಳೂರು – 9535354380 / 9448271447
ಅಥವಾ ಅಂತರ್ಜಾಲ ಪುಟದಲ್ಲಿ ಲಭ್ಯ.
ವಿಷು ವಿಶೇಷ ಸ್ಪರ್ಧೆ 2017 – ಸಂಚಾಲಕರು: ರವಿಶಂಕರ ದೊಡ್ಡಮಾಣಿ, editor@oppanna.com/ 08547245304
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.