ವೈದ್ಯರು, ಶಸ್ತ್ರಚಿಕಿತ್ಸಕರು ತಮ್ಮಲ್ಲಿ ಬರುವ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡುವುದು ಕಂಡು ಬಂದಿದ್ದು ಬಹಳ ಕಡಿಮೆ. ಹೀಗಿರುವಾಗ 3000 ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ದೇಶದ ಅಗ್ರ ನ್ಯೂರೋಸರ್ಜನ್ಗಳಲ್ಲಿ ಒಬ್ಬರಾಗಿರುವ ಡಾ. ಅರವಿಂದ್ ಭತೇಜ 2013ರಿಂದ 2016ರ ವರೆಗೆ ಬಡ ರೋಗಿಗಳಿಗೆ 97 ಉಚಿತ ಅಥವಾ ರಿಯಾಯಿತಿ ದರದಲ್ಲಿ ಬೆನ್ನು ಶಸ್ತ್ರಚಿಕಿತ್ಸೆಗೆ ನಿಧಿ ಸಂಗ್ರಹಿಸಲು ಸೈಕಲ್ನಲ್ಲಿ ಬಹುದೂರ ಸಂಚರಿಸಿದ್ದಾರೆ.
ಬೆಂಗಳೂರು ಮೂಲದ ಡಾ. ಭತೇಜ ತಮ್ಮದೇ ಆದ ಸೀತಾ ಭತೇಜ ಸ್ಪೆಷ್ಯಾಲಿಟಿ ಆಸ್ಪತ್ರೆ ಹೊಂದಿದ್ದಾರೆ. ಅಲ್ಲಿಯ ನರಶಸ್ತ್ರಚಿಕಿತ್ಸಕರ ತಂಡದ ಮುಖ್ಯಸ್ಥರೂ ಆಗಿದ್ದಾರೆ. ಅವರು ಅಗ್ರಮಾನ್ಯ ಹವ್ಯಾಸಿ ಸೈಕ್ಲಿಸ್ಟ್ಗಳಲ್ಲಿ ಒಬ್ಬರು.
ಇತ್ತೀಚೆಗೆ ತಮ್ಮ 6 ದಿನಗಳ ನೀಲ್ಗಿರಿಸ್ (ಟಿಎಫ್ಎನ್) ಪ್ರವಾಸದಲ್ಲಿ ಕೇರಳ, ಕರ್ನಾಟಕ, ತಮಿಳುನಾಡಿನಾದ್ಯಂತ 800 ಕಿ.ಮೀ. ಸಂಚರಿಸಿ ಅನುಭವಸ್ಥರಲ್ಲಿ ಅಗ್ರಮಾನ್ಯರೆನಿಸಿಕೊಂಡರಲ್ಲದೇ ಶಸ್ತ್ರಚಿಕಿತ್ಸೆಗೆ ಹಣ ಪಾವತಿಸಲು ಸಾಧ್ಯವಾಗದ ಬಡವರ ಬೆನ್ನು ಶಸ್ತ್ರಚಿಕಿತ್ಸೆಗಾಗಿ 3.5 ಲಕ್ಷ ನಿಧಿ ಸಂಗ್ರಹವನ್ನೂ ಮಾಡಿದ್ದಾರೆ.
ಡಾ. ಭತೇಜ ಅವರ ಆಸ್ಪತ್ರೆ ಟಿಎಫ್ಎನ್ ಕಾರ್ಯಕ್ರಮದ ವೇಳೆ ವೈದ್ಯಕೀಯ ಪಾಲುದಾರಿಕೆ ಪಡೆದ ಮೇಲೆ ಶಸ್ತ್ರಚಿಕಿತ್ಸೆಗೆ ನಿಧಿ ಸಂಗ್ರಹಿಸುವ ಕಲ್ಪನೆ ಭತೇಜ ಅವರಲ್ಲಿ ಮೂಡಿತು. ಈ ಕಾರ್ಯಕ್ರಮದ ಭಾಗವಾಗಿ ಟಿಎಫ್ಎನ್ ಭತೇಜ ಅವರ ಆಸ್ಪತ್ರೆಗೆ ಉಚಿತ ಭಾಗವಹಿಸುವಿಕೆ ಅವಕಾಶವನ್ನೂ ಕಲ್ಪಿಸಿತು.
ಡಾ. ಭತೇಜ ಹಾಗೂ ಅವರ ತಂಡ 2009ರಿಂದ ಟಿಎಫ್ಎನ್ ಜೊತೆ ಸಂಪರ್ಕ ಹೊಂದಿದ್ದು, 2013ರಲ್ಲಿ ಗೌತಮ್ ರಾಜಾ ಅವರು ಸೀತಾ ಭತೇಜ ಆಸ್ಪತ್ರೆ ಪರ ಸೈಕಲ್ ರೈಡರ್ ಆಗಲು ಮನವಿ ಮಾಡಿದ್ದು, ಅನಂತರ ಗೌತಮ್ ಮತ್ತು ಡಾ. ಭತೇಜ ಆಸ್ಪತ್ರೆಯ ಯೋಜನೆಯ ಭಾಗವಾಗಿ ನಿಧಿ ಸಂಗ್ರಹಿಸಲು ನಿರ್ಧರಿಸಿದರು.
ಬೆನ್ನು ಶಸ್ತ್ರಚಿಕಿತ್ಸೆ ಬಗ್ಗೆ ರೋಗಿಗಳಿಗೆ ಸಂಪೂರ್ಣ ಅರ್ಥವಾಗದೇ ಇದ್ದು, ಅವರು ಶಸ್ತ್ರಚಿಕಿತ್ಸೆಗೆ ಭಯಪಡುತ್ತಾರೆ. ಇದಕ್ಕಾಗಿ ಡಾ. ಭತೇಜ ಮತ್ತು ಅವರ ತಂಡ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ಪ್ರಯತ್ನಿಸುತ್ತಿದೆ.
ಡಾ. ಭತೇಜ ಅವರು 2013ರಲ್ಲಿ ಆಸ್ಪತ್ರೆಗಾಗಿ 1.5 ಲಕ್ಷ ರೂ. ನಿಧಿ ಸಂಗ್ರಹಿಸಿದ್ದು, 2014ರಲ್ಲಿ ಡಾ. ಅರವಿಂದ್ ಭತೇಜ ಅವರ ಸಹೋದರ ವಿವೇಕ್ ಸೈಕಲ್ ಸವಾರಿ ನಡೆಸಿ 3.5 ಲಕ್ಷ ನಿಧಿ ಸಂಗ್ರಹಿಸಿದ್ದರು. 2015ರಲ್ಲಿ 10 ಲಕ್ಷ ರೂ ನಿಧಿ ಸಂಗ್ರಹಿಸಲಾಗಿದೆ.
ಈ ವರ್ಷ ಡಾ. ಭತೇಜ ಟಿಎಫ್ಎನ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದು, ತಾವು ಬಹುಮಾನವಾಗಿ ಪಡೆದ ಟ್ರೆಕ್ ಬೈಕ್, ಹೀರೋ ಎಂಟಿಬಿ ಮಾರಾಟ ಮಾಡಿ ಯೋಜನೆಯ ಭಾಗವಾಗಿ ನಿಧಿ ಸಂಗ್ರಹಿಸಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳಿಗೆ ಆಸ್ಪತ್ರೆ ಮೂಲಕ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ರೋಗಿಗಳು ತಮಗೆ ಸಾಧ್ಯವಾದಷ್ಟು ಹಣವನ್ನು ಪಾವತಿಸಿದರೆ ಉಳಿದ ಹಣ ಭರಿಸುವ ಜವಾಬ್ದಾರಿ ಆಸ್ಪತ್ರೆ ವಹಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.