ಅಸ್ಸಾಂ: ಜನರಿಗೆ ಅನವಶ್ಯಕ ಹೊರೆ ಹಾಗೂ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ವಾಹನ ನೋಂದಣಿಗಳನ್ನು ಆನ್ಲೈನ್ ಮೂಲಕವೇ ಮಾಡಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ಚಂದ್ರಮೋಹನ್ ಪಟವಾರಿ ತಿಳಿಸಿದ್ದಾರೆ.
ಸಾರಿಗೆ ಇಲಾಖೆ ವತಿಯಿಂದ ’ಆನ್ಲೈನ್ ಡೀಲರ್ ಪೈಂಟ್ ರಜಿಸ್ಟ್ರೇಶನ್’ಗೆ ಚಾಲನೆ ನೀಡಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಜಿಲ್ಲಾ ಸಾರಿಗೆ ಇಲಾಖೆ ಮುಂದೆ ಅನಗತ್ಯವಾಗಿ ಕ್ಯೂ ನಿಲ್ಲುವುದು ಹಾಗೂ ಸಾರ್ವಜನಿಕರ ಸಮಯ ಉಳಿಸುವುದಕ್ಕಾಗಿ ಈ ಹೆಜ್ಜೆ ಇಡಲಾಗಿದೆ ಎಂದು ಅವರು ಹೇಳಿದ್ದಾರೆ.
ಆನ್ಲೈನ್ ಅರ್ಜಿಗೆ ಸಂಬಂಧಿಸಿದಂತೆ ಇಲಾಖೆಯ ವೆಬ್ಸೈಟ್ ಪ್ರವೇಶಿಸಲು ಡೀಲರ್ಗಳಿಗೆ ಒಂದು ಯೂಸರ್ನೇಮ್ ಹಾಗೂ ಪಾಸ್ವರ್ಡ್ ನೀಡಲಾಗಿರುತ್ತದೆ. ಅದರಲ್ಲಿ ನೀಡಲಾಗಿರುವ ಎಲ್ಲ ಅಂಶಗಳನ್ನು (ವಿಮೆ ಹಾಗೂ ನೊಂದಣಿ ಶುಲ್ಕದ ವಿವರ ಸಹಿತ) ಡೀಲರ್ ಭರ್ತಿ ಮಾಡಿ ಜಿಲ್ಲಾ ಸಾರಿಗೆ ಇಲಾಖೆಗೆ ಸಲ್ಲಿಸಬೇಕು.
ಅರ್ಜಿಯನ್ನು ಪರಿಶೀಲಿಸಿ ವಾಹನ ನೋಂದಣಿ ಸಂಖ್ಯೆಯನ್ನು ಡೀಲರ್ಗೆ ಕೊಡಲಾಗುತ್ತದೆ. ಖರೀದಿದಾರರು ತಮ್ಮ ವಾಹನದ ನೊಂದಣಿ ಸಂಖ್ಯೆ ಪಡೆಯಲು ಜಿಲ್ಲಾ ಸಾರಿಗೆ ಇಲಾಖೆಗೆ ಹೋಗುವ ಅವಶ್ಯಕತೆಯೇ ಇರುವುದಿಲ್ಲ. ಅವರು ಡೀಲರ್ ಬಳಿಯೇ ಆ ಸಂಖ್ಯೆಯನ್ನು ಪಡೆಯಬಹುದು ಎಂದರು.
ಇದೊಂದು ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತಮವಾದ ಹೆಜ್ಜೆ. ಇದರಿಂದ ಮಾನವ ಸಂಪನ್ಮೂಲ ಅವಶ್ಯಕತೆಯೂ ಅಷ್ಟಾಗಿ ಇರುವುದಿಲ್ಲ. ಮೇಲಿಂದ ಮೇಲೆ ಇಲಾಖೆಗೆ ಅಲೆದಾಡುವ ಚಿಂತೆಯೂ ಇಲ್ಲ ಎಂದು ಸಾರಿಗೆ ಇಲಾಖೆಯ ಆಯುಕ್ತ ಅಶುತೋಷ್ ಅಗ್ನಿಹೋತ್ರಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ವಾಹನ ಚಾಲನಾ ಪರವಾನಿಗೆಯನ್ನೂ ಆನ್ಲೈನ್ ಮೂಲಕವೇ ಮಾಡುವ ಚಿಂತನೆ ಇದೆ ಎಂದು ಸಚಿವ ಚಂದ್ರಮೋಹನ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.