ಧಾರವಾಡ: ಬೆಂಗಳೂರಿನ ವಿನಯಕುಮಾರ ಮತ್ತು ಐಶ್ವರ್ಯ ಬಿಲ್ಲುಗಾರಿಕೆಯ ಸ್ಪರ್ಧೆಯಲ್ಲಿ ಅನುಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಪಡೆದ ಗೌರವಕ್ಕೆ ಪಾತ್ರರಾದರು.
ರಾಜ್ಯ ಓಲಿಂಪಿಕ್ ನಿಮಿತ್ತ ಯುನಿರ್ವಸಿಟಿ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಆರಂಭಗೊಂಡ ಬಿಲ್ಲುಗಾರಿಕೆ ಸ್ಪರ್ಧೆಯ ಪುರುಷರ ವಿಭಾಗದ 50 ಮೀ. ಇಂಡಿಯನ್ ರೌಂಡ್ ವಿಭಾಗದಲ್ಲಿ 292 ಅಂಕ ಶೇಖರಿಸಿ ಚಿನ್ನದ ಪದಕ ಗಳಿಸಿದ ಗೌರವಕ್ಕೆ ಪಾತ್ರರಾದರು.
ಬೆಂಗಳೂರಿನವರೇ ಆದ ದೀಪಕ 255 ಅಂಕಗಳಿಂದ ರಜತ ಮತ್ತು ಬೆಳಗಾವಿಯ ಅಜಯ ಶಿರಾಲಿ 225 ಅಂಕಗಳಿಂದ ಕಂಚಿನ ಪದಕಕ್ಕೆ ಸಮಾದಾನ ಪಡಬೇಕಾಯಿತು.
ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಐಶ್ವರ್ಯ 30 ಮೀ. ಇಂಡಿಯನ್ ರೌಂಡ ವಿಭಾಗದಲ್ಲಿ 161 ಅಂಕಗಳಿಸಿ ಚಿನ್ನ ಗೆದ್ದರು. ನಾಗಶ್ರೀ 156 ಅಂಕ ಪಡೆದು ರಜತ ಮತ್ತು ಅಂಕಿತಾ 143 ಅಂಕ ಗಳಿಸಿ ಕಂಚು ಪಡೆದರು.
ಬಿಲ್ಲುಗಾರಿಕೆ ಕ್ರೀಡೆಯು ದಕ್ಷಿಣ ಕರ್ನಾಟಕದಲ್ಲಿ ಮಾತ್ರ ಜನಯಪ್ರಿಯವಾಗಿದ್ದು, ಉತ್ತರ ಕರ್ನಾಟಕದ ಕ್ರೀಡಾಪಟುಗಳಿಗೆ ಇದೆ ಮೊದಲ ಬಾರಿಗೆ ಪರಿಚಯವಾಗಿದ್ದು ಸಂತಸ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.