ನವದೆಹಲಿ: ಸೌದಿ ಅರೇಬಿಯಾದ ಖ್ಯಾತ ಪ್ರಗತಿಪರ ಅಂಕಣಕಾರ ಮತ್ತು ಚಿಂತಕ ಖಲಾಫ್ ಅಲ್-ಹರ್ಬಿ ಭಾರತವನ್ನು ಹಾಡಿಹೊಗಳಿದ್ದಾರೆ. ಭಾರತ ಈ ಜಗತ್ತಿನ ಅತ್ಯಂತ ಸಹಿಷ್ಣು ರಾಷ್ಟ್ರ ಎಂದು ಬಣ್ಣಿಸಿದ್ದಾರೆ.
ಸೌದಿ ಗಝೆಟ್ನಲ್ಲಿನ ಅವರು ‘ಇಂಡಿಯಾ-ಎ ಕಂಟ್ರಿ ದಟ್ ರೈಡ್ಸ್ ಎಲಿಫೆಂಟ್ಸ್’ ಎಂಬ ಶೀರ್ಷಿಕೆಯ ಅಂಕಣ ಬರೆದಿದ್ದು, ಇದರಲ್ಲಿ ಭಾರತ ನೂರಾರು ಧರ್ಮ, ಭಾಷೆಗಳನ್ನು ಹೊಂದಿದ್ದರೂ ಅಲ್ಲಿನ ಜನ ಸೌಹಾರ್ದ ಮತ್ತು ಶಾಂತಿಯಿಂದ ಬದುಕುತ್ತಿದ್ದಾರೆ ಎಂದಿದ್ದಾರೆ. ಅಲ್ಲದೇ ಹೊರ ಜಗತ್ತು ಭಾರತವನ್ನು ಸಂಕುಚಿತ ಮನೋಭಾವದಿಂದ ಬಡ ದೇಶ ಎಂಬಂತೆ ಕಾಣುತ್ತಿದೆ ಇದು ತಪ್ಪು ಎಂದು ಅವರು ಹೇಳಿದ್ದಾರೆ.
‘ಭಾರತದಲ್ಲಿ 100 ಧರ್ಮಗಳಿವೆ, 100 ಭಾಷೆಗಳಿವೆ. ಆದರೂ ಅಲ್ಲಿನ ಜನ ಶಾಂತಿ, ಸೌಹಾರ್ದದಿಂದ ಬದುಕುತ್ತಿದ್ದಾರೆ. ಅವರೆಲ್ಲರೂ ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡಲು, ಸೂಜಿಯಿಂದ ಹಿಡಿದು ಮಂಗಳಯಾನದವರೆಗೂ ಪ್ರತಿಯೊಂದನ್ನು ತಯಾರಿಸಲು ಪರಸ್ಪರ ಕೈಜೋಡಿಸುತ್ತಿದ್ದಾರೆ. ನಿಜಕ್ಕೂ ನನಗೆ ಅಸೂಯೆಯಾಗುತ್ತಿದೆ, ಏಕೆಂದರೆ ನಾನು ಕೇವಲ ಒಂದು ಧರ್ಮ, ಒಂದು ಭಾಷೆಯನ್ನೊಳಗೊಂಡ ಜಗತ್ತಿನ ಮೂಲೆಯಿಂದ ಬಂದಿದ್ದೇನೆ ಆದರೂ ಅಲ್ಲಿ ನಿರಂತರ ಹತ್ಯೆಯನ್ನು ಕಾಣುತ್ತಿದ್ದೇನೆ. ತಾಳ್ಮೆಯ ಬಗ್ಗೆ ಈ ಜಗತ್ತು ಏನು ಹೇಳುತ್ತದೆ ಎಂಬುದು ಮುಖ್ಯವಲ್ಲ, ಧಾರ್ಮಿಕ, ಸಾಮಾಜಿಕ, ರಾಜಕೀಯ ಮತ್ತು ಜನಾಂಗೀಯ ಭಿನ್ನತೆಯನ್ನು ಲೆಕ್ಕಿಸದೆ ಭಾರತ ತಾಳ್ಮೆಯ ಬಗ್ಗೆ, ಶಾಂತಿಯುತ ಸಹಬಾಳ್ವೆಯ ಬಗ್ಗೆ ತಿಳಿಸಿಕೊಡುವ ಒಂದು ಪುರಾತನ ಮತ್ತು ಅತಿಮುಖ್ಯ ಪಾಠ ಶಾಲೆ’.
ಭಾರತ ಒಂದು ಹಿಂದುಳಿತ ಮತ್ತು ಬಡ ರಾಷ್ಟ್ರವೆಂಬ ಚಿತ್ರಣವೇ ಹಲವರಲ್ಲಿದೆ. ಆದರೆ ಇದು ಸಂಪೂರ್ಣ ಸುಳ್ಳು ಚಿತ್ರಣ. ವಾಸ್ತವಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ನಾವು (ಅರಬರು) ತೈಲ ಸಮೃದ್ಧ ದೇಶವಾಗುವ, ಬಡವರಾಗಿರುವ ವೇಳೆ ಭಾರತವನ್ನು ಸಮೃದ್ಧ ಮತ್ತು ನಾಗರಿಕ ದೇಶವೆಂದು ಕಲ್ಪಿಸಿಕೊಂಡಿದ್ದೆವು ಆದರೆ ಆರ್ಥಿಕವಾಗಿ ಬಲಿಷ್ಠರಾದ ಬಳಿಕ ಭಾರತ ಬಡ ರಾಷ್ಟ್ರ ಎಂಬ ಮನೋಧರ್ಮ ನಮ್ಮಲ್ಲಿ ಬೆಳೆಯಿತು. ಇದು ವಾಸ್ತವಿಕವಲ್ಲದ ತೀರ್ಪಿನಿಂದ ಉದ್ಭವಿಸಿದ ಕಲ್ಪನೆ. ಭಾರತ ಹಳೆಯ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದ ರಾಷ್ಟ್ರ, ಅದು ಧರ್ಮ ಅಥವಾ ಜನಾಂಗದಲ್ಲಿ ಹೆಚ್ಚಿನ ಅಂತರವನ್ನು ನೋಡುವುದಿಲ್ಲ. ಈ ದೇಶ ಎಂದೂ ತನ್ನ ಬಡವರನ್ನು ನಿರ್ಲಕ್ಷಿಸುವುದಿಲ್ಲ, ಶ್ರೀಮಂತರನ್ನು ದ್ವೇಷಿಸುವುದಿಲ್ಲ. ಗಾಂಧೀಜಿ ಮತ್ತು ಬ್ರಿಟಿಷ್ ವಸಾಹತುಗಾರರ ಬಗ್ಗೆ ಗೌರವವನ್ನಿಟ್ಟುಕೊಂಡ ದೇಶ.
ಭಾರತೀಯರು ನಿಜಕ್ಕೂ ಶ್ರೇಷ್ಠ ಜನರು. ಅಸೂಯೆಗಾರರನ್ನು ಮತ್ತು ಕೃತಘ್ನರಲ್ಲದವರನ್ನು ಹೊರತುಪಡಿಸಿ ಯಾರೊಬ್ಬರು ಈ ಮಾತನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಅವರು ಖಲಾಫ್ ಅಲ್-ಹರ್ಬಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.