ಧಾರವಾಡ : ಕರ್ನಾಟಕ ಸರ್ಕಾರವು 30 ವರ್ಷಗಳ ನಂತರ ಉತ್ತರ ಕರ್ನಾಟಕದ ಹೃದಯ ಭಾಗವಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಕರ್ನಾಟಕ ರಾಜ್ಯ ಒಲಂಪಿಕ್ ಕ್ರೀಡಾಕೂಟವನ್ನು ಆಯೋಜಿಸಿದ್ದು, ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳು ಸಹಕಾರದಿಂದ ಉತ್ತಮ ರೀತಿಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಿದ್ದು ಮಾಧ್ಯಮಗಳು ಉತ್ತಮ ಪ್ರಚಾg ನೀಡುವ ಮೂಲಕ ಸಹಕರಿಸಬೇಕೆಂದು ಗಣಿ,ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ಆರ್.ಎನ್.ಶೆಟ್ಟಿ ಕ್ರಿಡಾಂಗಣ ಬಳಿ ಇರುವ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆರಂಭಿಸಿರುವ “ಕರ್ನಾಟಕ ರಾಜ್ಯ ಒಲಿಂಪಿಕ್ ಕ್ರೀಡಾಕೂಟ-2017ರ” ಮಾಧ್ಯಮ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮ ಕೇಂದ್ರದ ಉದ್ಘಾಟನಾ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಉಪ ನಿರ್ದೇಶಕ ಡಾ. ಸದಾಶಿವ ಮರ್ಜಿ, ಎನ್.ಐ.ಸಿ ಕೇಂದ್ರದ ಶ್ರೀಮತಿ ಮೀನಾ ಕುಮಾರಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಪ್ರಚಾರ ಸಮಿತಿಯ ವಸಂತ ಮುರಡೇಶ್ವರ, ಪಿ.ಎಸ್.ಹಿರೇಮಠ, ಗುರುರಾಜ ಜಮಖಂಡಿ, ಪಿ.ಎಸ್.ಪರ್ವತಿ ಮುಂತಾದವರು ಉಪಸ್ಥಿತರಿದ್ದರು.
ಕ್ರೀಡಾ ತರಬೇತಿದಾರರೊಂದಿಗೆ ಸಂವಾದ
ಮಾಧ್ಯಮ ಕೇಂದ್ರದ ಉದ್ಘಾಟನಾ ಪೂರ್ವದಲ್ಲಿ ಪತ್ರಕರ್ತರೊಂದಿಗೆ ಕ್ರೀಡಾ ತರಬೇತುದಾರರ ಸಂವಾದವನ್ನು ಏರ್ಪಡಿಸಲಾಗಿತ್ತು. ಸಂವಾದದಲ್ಲಿ ವೇಟ್ಲಿಫ್ಟಿಂಗ್ ಕ್ರೀಡೆಯ ತರಬೇತುದಾರ ಸದಾನಂದ ಮಾಲಶೆಟ್ಟಿ, ಜಿಮ್ನಾಸ್ಟಿಕ್ ತರಬೇತುದಾರ ರಮೇಶ ಘಟ್ನಟ್ಟಿ, ಬಾಸ್ಕೆಟ್ಬಾಲ್ ತರಬೇತುದಾರ ಪಿ.ಕೆ.ಹಾಸನಕರ, ಈಜು ತರಬೇತುದಾರ ಕಿರಣ ಹಿರೇಮಠ, ಶಾರದಾ ಪಾಟೀಲ ಹಾಗೂ ಹಿರಿಯ ಪತ್ರಕರ್ತರಾದ ಗುರುರಾಜ ಜಮಖಂಡಿ, ವಸಂತ ಮುರಡೇಶ್ವರ, ಕವಿವಿಯ ಡಾ.ಜೆ.ಎಂ.ಚಂದುನವರ, ಆಕಾಶವಾಣಿಯ ಅನಿಲ ದೇಸಾಯಿ ಮಾತನಾಡಿದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಸಂವಾದ ಸಂಯೋಜಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.