ಮಂಗಳೂರು : ಶತಮಾನಗಳ ಇತಿಹಾಸವಿರುವ ಕಂಬಳವು ಕರಾವಳಿ ಕರ್ನಾಟಕದ ಹಾಗೂ ಕಾಸರಗೋಡು ಜಿಲ್ಲೆಗಳ ಜನಜೀವನದ ಅವಿಭಾಜ್ಯ ಅಂಗವಾಗಿದೆ. ಕೃಷಿಯೊಂದಿಗೆ ನಂಟನ್ನು ಹೊಂದಿರುವ ಕರಾವಳಿಯ ಈ ಸಾಂಪ್ರದಾಯಿಕ ಆಚರಣೆ, ಕ್ರೀಡೆಗೆ ಧಾರ್ಮಿಕ ಹಿನ್ನಲೆಯೂ ಇದೆ. ಕಂಬಳ ನಡೆಯುವಂತಹ ಗದ್ದೆಯನ್ನು ಒಂದು ಪವಿತ್ರ ಸ್ಥಳವಾಗಿ ಪರಿಗಣಿಸಲಾಗುತ್ತದೆ. ಕಂಬಳದ ಕೋಣಗಳನ್ನು ಚಿಕ್ಕ ಕರುವಿರುವಾಗಲೇ ಗುರುತಿಸಿ ಅವುಗಳನ್ನು ತಮ್ಮ ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿ ವಾತ್ಸಲ್ಯದಿಂದ ಸಲಹುದರೊಂದಿಗೆ ಅವುಗಳಿಗೆ ಅಗತ್ಯ ತರಬೇತಿಯನ್ನು ನೀಡಲಾಗುತ್ತದೆ. ಕಂಬಳ ನಡೆಯುವ ದಿವಸ ಕೋಣಗಳನ್ನು ಅಲಂಕರಿಸಿ ಅವುಗಳಿಗೆ ಪೂಜೆ ಮಾಡಿ, ತಿಲಕವಿಟ್ಟು ಮದುವೆಯ ಸಂಭ್ರಮದಂತೆಯೆ ಅವುಗಳನ್ನು ಕಂಬಳಗದ್ದೆಗೆ ಕೊಡುಹೋಗಲಾಗುತ್ತದೆ. ಪ್ರೀತಿಯಿಂದ ಸಾಕಿದ ಮಗುವಿಗೆ ಯಾರೂ ಹಿಂಸೆಯನ್ನು ಕೊಡುವುದಿಲ್ಲ. ಹಾಗೆಯೇ ಕೋಣಗಳಿಗೂ ಕಂಬಳದಲ್ಲಿ ಹಿಂಸೆಯನ್ನು ಕೊಡುತ್ತಿಲ್ಲ. ಗದ್ದೆ ಉಳುವಾಗ ಹೋರಿ ಮತ್ತು ಎತ್ತುಗಳನ್ನು ತಮ್ಮ ನಿಯಂತ್ರಣದಲ್ಲಿರಿಸಲು ಅಥವಾ ಬೇರೆ ಪ್ರಾಣಿಗಳಿಗೆ ತರಬೇತಿ ಕೊಡುವಾಗ ಕೂಡಾ ಬೆತ್ತವನ್ನು ಇಟ್ಟುಕೊಂಡಿರುತ್ತಾರೆ ವಿನಹ ಅವುಗಳನ್ನು ಹಿಂಸಿಸುವ ದೃಷ್ಟಿಯಿಂದಲ್ಲ. ಕಂಬಳವು ಎಲ್ಲಾ ವರ್ಗಗಳ, ಎಲ್ಲಾ ಜಾತಿ ಮತ ಬಾಂಧವರು ಸೇರಿ ಆಚರಿಸುವ ಒಂದು ಧಾರ್ಮಿಕ ಹಾಗೂ ಜನಪದೀಯ ಆಚರಣೆಯಾಗಿದೆ. ಇದು ಸಮಾಜದಲ್ಲಿ ಸಾಮರಸ್ಯದ ಸಹಜೀವನವನ್ನು ನಡೆಸುವುದಕ್ಕೆ ಮತ್ತು ನಮ್ಮ ಉನ್ನತವಾದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ.
ಕಂಬಳದಂತಹ ಧಾರ್ಮಿಕ, ಜನಪದೀಯ ಆಚರಣೆಗಳನ್ನು ನಿಲ್ಲಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ದೇಶದ ತಳಪಾಯಕ್ಕೆ ಅಪಾಯ ಉಂಟಾಗುವ ಸ್ಥಿತಿ ಒದಗಬಹುದು. ಆದ ಕಾರಣ ಕಂಬಳವನ್ನು ಉಳಿಸಲು ಎಲ್ಲರೂ ಒಕ್ಕೊರಲಿನಿಂದ ಧ್ವನಿ ಎತ್ತಬೇಕು. ಈ ನಿಟ್ಟಿನಲ್ಲಿ ನಾನು ಈಗಾಗಲೇ ಹೈಕೋರ್ಟಿನಲ್ಲಿ ದಾವೆ ಹೂಡುವ ಬಗ್ಗೆ ವಕೀಲರನ್ನು ನೇಮಿಸಿರುತ್ತೇನೆ. ನಮ್ಮ ಮೂರು ಜಿಲ್ಲೆಗಳ ಜನರು ಜನವರಿ 28 ರಂದು ಮೂಡಬಿದ್ರೆಯಲ್ಲಿ ನಡೆಯುವ ಕಂಬಳ ಉಳಿಸಿ ಅಭಿಯಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಭಾವನೆಯನ್ನು ವ್ಯಕ್ತಪಡಿಸುವುದರೊಂದಿಗೆ ನಾವೆಲ್ಲರೂ ಜೊತೆಯಾಗಿ ಕಂಬಳವನ್ನು ಉಳಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಅಜಿತ್ಕುಮಾರ್ ರೈ ಮಾಲಾಡಿ ವಿನಂತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.