ಭಾರತ ಮಾತೆಯ ಪೂಜೆಯ ಅಂಗವಾಗಿ ಭಾರತೀಯರಿಗೆ ಪುಟ್ಟ ಸಂದೇಶ…
ಒಬ್ಬ ವ್ಯಕ್ತಿಯ ಜೀವನದಲ್ಲಿ ಆತನ ಚಾರಿತ್ರ್ಯ ಎಷ್ಟು ಮುಖ್ಯವೋ ಅದೇ ರೀತಿ ರಾಷ್ಟ್ರಕ್ಕೂ ಅದರದ್ದೇ ಆದ ಚಾರಿತ್ರ್ಯವಿದೆ. ಪ್ರತಿಯೊಬ್ಬನೂ ಅದನ್ನು ಕಾಪಾಡುವುದು ಅತೀ ಮುಖ್ಯ. ವಯಕ್ತಿಕ ಚಾರಿತ್ರ್ಯವನ್ನು ಬೆಳೆಸಿಕೊಳ್ಳುವುದರ ಜೊತೆ ಜೊತೆಗೆ ರಾಷ್ಟ್ರೀಯ ಚಾರಿತ್ರ್ಯವನ್ನು ಕಾಪಾಡುವುದು ಇಂದು ಅತ್ಯಗತ್ಯ.
ನಮ್ಮ ದೇಶವು ಬಹು ಪ್ರಾಚೀನ ಕಾಲದಿಂದಲೂ ನೀತಿಗೆ ಹೆಸರಾಗಿರುವುದು. ರಾಜ ಹರಿಶ್ಚಂದ್ರನು ತನ್ನ ವಚನ ಪಾಲಿಸುವುದಕ್ಕಾಗಿ ಹೆಂಡತಿ ಮಕ್ಕಳನ್ನು ಮಾರಿದನು. ತನ್ನ ರಾಜ್ಯವನ್ನು ಋಶಿ ವಿಶ್ವಾಮಿತ್ರನಿಗೆ ಕೊಟ್ಟನು. ಪಿತೃವಾಕ್ಯ ಪರಿಪಾಲಕ ಮರ್ಯಾದ ಪುರುಷೋತ್ತಮನಾಗಿ ಅಯೋಧ್ಯಾಪತಿ ಶ್ರೀರಾಮಚಂದ್ರನ ಜೀವನ ಮಾರ್ಗ ಇಂದಿಗೂ ಆದರ್ಶಮಯ. ತ್ಯಾಗದ ಈ ನಾಡಿನಲ್ಲಿ ಇಂದು ಕಾಣುತ್ತಿರುವುದೇನು. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಜನ ಯಾವ ತ್ಯಾಗವನ್ನು ಮಾಡಲೂ ಹಿಂದೆ ಮುಂದೆ ನೋಡಲಿಲ್ಲ. ಮನೆ ಮಾರುಗಳನ್ನು ಬಿಟ್ಟು ದೇಶಕ್ಕಾಗಿ ಸೆರೆಮನೆಯನ್ನು ಸೇರಿದರು. ಸಾವಿರಾರು ತರುಣ ತರುಣಿಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರ ಗುಂಡಿಗೆ ಆಹುತಿಯಾದರು. ಅವರಿಗೆ ಯಾವ ಸ್ವಾರ್ಥವೂ ವಯಕ್ತಿಕ ಆಸೆಯೂ ಇರಲಿಲ್ಲ. ಅವರ ಗುರಿ ಕೇವಲ ಭಾರತದ ಸ್ವಾತಂತ್ರ್ಯವಾಗಿತ್ತು.
ಆದರೆ ನ್ನಾವಿಂದು ಕಾಣುತ್ತಿರುವುದೇನು, ದೇಶವನ್ನು ಯಾವ ಆಧಾರದ ಮೇಲೆ ಕಟ್ಟಬೇಕಿತ್ತೋ ಆ ಶ್ರೇಷ್ಠ ಆದರ್ಶಗಳನ್ನು ಬದಿಗಿಟ್ಟು ಸ್ವಾರ್ಥಾಂದರಾಗಿ ಅವರ ತ್ಯಾಗ ಬಲಿದಾನಗಳನ್ನು ಮರೆತು ದೇಶದ ವಿರುಧವೇ ನಡೆಯಲು ಪ್ರಾರಂಬಿಸಿದೆವು. ಯಾವ ಆಧಾರದ ಮೇಲೆ ದೇಶ ನಡಯಬೇಕಿತ್ತೋ ಅದನ್ನು ಮರೆತು ತಮಗೆಬೇಕಾದ ಹಾಗೆ ನಡೆಯಲು ಪ್ರಾರಂಭಿಸಿದರು. ಕೇವಲ ಸ್ವಾರ್ಥ ಹಾಗು ಸ್ವಯಂ ಪ್ರತಿಷ್ಠೆಗೆ ಕಚ್ಚಾಡುತ್ತಿದ್ದೆವೆ. ಸ್ವಾತಂತ್ರ್ಯ ಬಂದು ೭೧ ವರ್ಷಗಳಾದರೂ ಕೆಲವಷ್ಟು ಸಮಸ್ಯೆಗಳ ಪರಿಹಾರ ಸಾಧ್ಯವಾಗಲಿಲ್ಲ. ಗಣತಂತ್ರ ವ್ಯವಸ್ಥೆ ಜಾರಿಯಾಗಿ ೬೮ ಕಳೆದರೂ ಐವತಕ್ಕಿಂತಲೂ ಹೆಚ್ಚಿನ ವರ್ಷ ಹೀಗೆ ಕಳೆದೆವು. ಮಂತ್ರಿಗಳಿಗೆ ಪದವಿ ಸಿಕ್ಕರೆ ಸಾಕು ಸಾರ್ಥಕ ಎಂದುಕೊಳುತ್ತಾರೆ. ಅಧಿಕಾರ ಸ್ಥಿರವಲ್ಲ ಎಂಬ ಮಾತನ್ನು ಮರೆತು ಜನ ಪ್ರತಿಗಳಾದ ಅವರು ಜನ ಸಾಮಾನ್ಯರಂತೆ ವಾಸಿಸದೆ ಐಶ್ವರ್ಯ ಭೋಗಗಳಲ್ಲಿ ಹೊರಳಾಡುತ್ತಿದ್ದಾರೆ. ಇತ್ತಿಚಿಗಂತೂ ನಡೆದ ಲೋಕಾಯುಕ್ತ ದಾಳಿ ನೋಡಿದರೆ ಸಾಕು ಅಧಿಕಾರಿಗಳ ಸ್ವಾರ್ಥ ತಿಳಿಯುತ್ತದೆ.
ರಾಷ್ಟ್ರೀಯ ಭಾವನೆ ಎಂಬುದು ಅವರಲ್ಲಿ ಎಳ್ಳಷ್ಟು ಉಳಿದಿಲ್ಲ. ಸ್ವಾರ್ಥದ ಮುಂದೆ ಯಾವುದೂ ನಿಲ್ಲುತಿಲ್ಲ. ಇದಕ್ಕೆ ಮೂಲ ಕಾರಣ ಸೆಕ್ಯೂಲರಿಸಂ ಎಂಬ ಭೂತ.
ಈ ಸೆಕ್ಯೂಲರಿಸಂ ನ ಭೂತಕ್ಕೆ ಹೆದರಿ ನಮ್ಮ ಶಿಕ್ಷಣವು value-less education (ಮೌಲ್ಯ ರಹಿತ ಶಿಕ್ಷಣವಾಗಿ) ಪರಿವರ್ತನೆಯಾಗುತ್ತಿದೆ. ಮಕ್ಕಳಿಗೆ ಹೇಳಿಕೊಡಬೇಕಾಗಿದ್ದ ಸತ್ಯತೆ, ನೀತಿ, ನಿಯಮ, ರಾಷ್ಟ್ರಪ್ರೇಮ, ಮಾರ್ಕುಗಳ ಕಾರ್ಮೋಡದ ಹಿಂದೆ ಅವಿತುಕೊಂಡಿದೆ.
ಪ್ರತಿಯೊಬ್ಬ ಭಾರತೀಯನು ತಾನು ಮಾಡಬೇಕಾದ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮಾಡಬೇಕಾಗಿದೆ. ನಮ್ಮ ಸಂಸ್ಕೃತಿಯಲ್ಲಿ ತ್ಯಾಗ ಪ್ರಧಾನವಾದುದ್ದು ಎಂಬುದನ್ನು ಮರೆಯಬಾರದು. ನಮ್ಮ ಹಿರಿಯರು ಹಾಕಿಕೊಟ್ಟ ನಮ್ಮ ಮುಂದೆ ಇಟ್ಟುಕೊಳ್ಳಬೇಕು. ನಮ್ಮ ಪೂರ್ವಜರ ಆದರ್ಶ ಜೀವನವು ನಮಗೆ ದಾರಿದೀಪವಾಗಬೇಕು.
ಅಂತಹವರನ್ನು ಪರಿಚಯಿಸುವ ಮುಖ್ಯ ಕಾರ್ಯ ಆಗಬೇಕಿದೆ. ನಮ್ಮ ಸೈನಿಕರ ಸೇವೆ ಅವರ ತ್ಯಾಗ ಬಲಿದಾನವೂ ಎಲ್ಲರ ಮನೆ-ಮನಗಳನ್ನು ಮುಟ್ಟಬೇಕಿದೆ.
ಎಲ್ಲ ಸ್ವಾರ್ಥವನ್ನು ಬಿಟ್ಟು ರಾಷ್ತ್ರದ ಹಿತಕ್ಕಾಗಿ ಚಾರಿತ್ರ್ಯ ಶುಧರಾಗಿ ತರುಣಶಕ್ತಿ ಎದ್ದು ನಿಲ್ಲಬೇಕಾಗಿದೆ.
ಚಾರಿತ್ರ್ಯವಿಲ್ಲದೆ ನಾವು ರಾಷ್ಟ್ರವನ್ನು ಕಟ್ಟಲಾರೆವು, ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಚಾರಿತ್ರ್ಯವಿದೆ. ನಮ್ಮ ಪರಂಪರೆಯನ್ನು ನಾವು ಅರಿತುಕೊಳ್ಳಬೇಕು. ನಮ್ಮ ಆದರ್ಶಗಳನ್ನು ಮುಟ್ಟಲು ಅದನ್ನು ಪಾಲಿಸಲು ಪ್ರಯತ್ನಿಸಬೇಕು. ಹಾಗಾದರೆ ನಮ್ಮ ರಾಷ್ಟ್ರೀಯ ಚಾರಿತ್ರ್ಯವನ್ನು ಕಾಪಡಲು ಅದನ್ನು ಭದ್ರಗೊಳಿಸಲು ಯಾರಿಂದ ಸಾಧ್ಯ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ…..
ಜಗತ್ತನ್ನು ಶ್ರೇಷ್ಠವನ್ನಾಗಿಸುವ ಗುರಿಯನ್ನು ಸಾಧಿಸಲು ಇದೀಗ ಕಾಲ ಕೂಡಿಬಂದಿದೆ. ಇಲ್ಲಿನ ತರುಣ ತರುಣಿಯರು ಚಿಂತಿಸಿ ವಿವೇಕಿಗಳಾಗಿ ಯೋಗ್ಯವಾದುದ್ದನ್ನೇ ಮಾಡುವ ಮಾಡಿಸುವ ಧೀರರಾಗಬೇಕು. ಪರಿವರ್ತನೆ ನಮ್ಮ ಮನೆಗಳಿಂದಲೇ ಪ್ರಾರಂಭವಾಗಲಿ. ಹೀಗೆ ನಮ್ಮ ಮನೆಯೇ ಮೊದಲ ಶಿಕ್ಷಾ ಕೇಂದ್ರವಾಗಲಿ. ಹೀಗೆ ಮನೆಯೊಂದು ಮಂದಿರವಾಗಿ, ದೇಶವೊಂದು ದೇಗುಲವಾಗಿ ಆ ದೇಗುಲದ ಆರಾಧ್ಯ ದೈವ ತಾಯಿ ಭಾರತಿಯಾಗಿ ಪ್ರತಿ ಮನೆ-ಮನಗಳಲ್ಲಿ ಆಕೆಯ ಪೂಜೆಯಾದಾಗಲೇ ಮತ್ತೆ ತಾಯಿ ಭಾರತಾಂಬೆಯು ಜಗದ್ಗುರುವಾಗಿ ವಿಶ್ವಮಾತೆಯಾಗಿ ತನ್ನ ದಿವ್ಯ ಸಿಂಹಾಸನವನ್ನು ಅಲಂಕರಿಸುವಳು.
ಹಾಗದರೆ ಬನ್ನಿ ಆ ತಾಯಿ ಭಾರತಾಂಬೆಯನ್ನು ಮತ್ತೆ ಜಗದ್ಗುರು ವಿಶ್ವಮಾತೆಯನ್ನಾಗಿಸೋಣ….
#ವಂದೇ_ಮಾತರಂ
#ಭಾರತ್_ಮಾತಾ_ಕೀ_ಜೈ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.