ಜೈಪುರ: ಧರ್ಮನಿರಪೇಕ್ಷವಾಗಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಭಾರತಕ್ಕೆ ಸಮಾನ ನಾಗರಿಕ ಸಂಹಿತೆಯ ಅಗತ್ಯವಿದೆ ಎಂದು ಬಾಂಗ್ಲಾ ದೇಶದ ಲೇಖಕಿ ತಸ್ಲಿಮಾ ನಸ್ರಿನ್ ಹೇಳಿದ್ದಾರೆ.
ಜೈಪುರ ಸಾಹಿತ್ಯ ಹಬ್ಬದಲ್ಲಿ ಮಾತನಾಡಿರುವ ಅವರು, ಇಸ್ಲಾಂನ ವಿಮರ್ಶೆಯಿಂದ ಮಾತ್ರ ಇಸ್ಲಾಮಿಕ್ ರಾಷ್ಟ್ರಗಳನ್ನು ಜಾತ್ಯತೀತಗೊಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾನೂ ಸೇರಿದಂತೆ ಯಾರೇ ಆಗಲಿ ಹಿಂದೂ, ಬೌದ್ಧ ಅಥವಾ ಇನ್ನಿತರ ಯಾವುದೇ ಧರ್ಮ ಪ್ರಶ್ನಿಸಿ ಏನೂ ಆಗುವುದಿಲ್ಲ. ಆದರೆ ಇಸ್ಲಾಂ ಧರ್ಮವನ್ನು ಪ್ರಶ್ನಿಸಿ, ವಿಮರ್ಶಿಸಿದ ಕ್ಷಣದಲ್ಲೇ ಪ್ರಾಣಹಾನಿ, ಕೊಲೆಗಳು ನಡೆಯುತ್ತವೆ. ಇಸ್ಲಾಂ ಧರ್ಮ ಪ್ರಶ್ನಿಸಿದರೆ ಫತ್ವಾ ಹೊರಡಿಸುವ ಬದಲು, ಅಭಿಪ್ರಾಯ ಭೇದವಿದ್ದರೆ, ಬರವಣಿಗೆ ಮೂಲಕ ಉತ್ತರ ನೀಡಲಿ ಎಂದು ತಸ್ಲಿಮಾ ಹೇಳಿದ್ದಾರೆ.
ಇಸ್ಲಾಂ ಮೂಲಭೂತವಾದವನ್ನು ಉತ್ತೇಜಿಸುವುದು ಜಾತ್ಯತೀತತೆಯಲ್ಲ. ವಿಮರ್ಶೆ, ಟೀಕೆಗಳನ್ನು ತಿರಸ್ಕರಿಸುವ ಮನಸ್ಥಿತಿಯನ್ನು ಮೂಲಭೂತವಾದಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕುಗಳು ಇರಬಾರದೇ ? ಎಂದು ಪ್ರಶ್ನಿಸಿರುವ ಅವರು, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದಲ್ಲಿ ಮುಸ್ಲಿಂ ಮಹಿಳೆಯರಿಗೂ ನ್ಯಾಯ ಸಿಗುತ್ತದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.