ಇಟಾನಗರ್: ಕೇಂದ್ರ ಸರ್ಕಾರದ ರಾಷ್ಟ್ರೀಯ ಅಭಿಯಾನವಾಗಿರುವ ಡಿಜಿಧನ್ ಮೇಳವನ್ನು ಉಲ್ಲೇಖಿಸುತ್ತ, ಡಿಜಿಟಲ್ ಆಡಳಿತ ರಾಜ್ಯದ ಭವಿಷ್ಯವನ್ನು ಬೆಳಗಿಸಿ ನಿರೀಕ್ಷೆಗಳನ್ನು ಸಾಕಾರಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಹೇಳಿದ್ದಾರೆ.
ಇಲ್ಲಿಯ ಐಜಿ ಪಾರ್ಕ್ನಲ್ಲಿ ನಡೆದ ಮಹಾಸಭೆಯಲ್ಲಿ ಮಾತನಾಡುತ್ತಿದ್ದ ಖಂಡು ಅವರು, ಪ್ರಧಾನಿ ಮೋದಿ ಅವರು ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸಲು ಆರಂಭಿಸಿರುವ ಡಿಜಿಧನ್ ಮೇಳ ಅಭಿಯಾನ ಒಂದು ರಾಷ್ಟ್ರೀಯ ಅಭಿಯಾನವಾಗಿದೆ. ಅರುಣಾಚಲ ಪ್ರದೇಶ ಸರ್ಕಾರ ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿರಲಿದೆ ಎಂದು ಅವರು ಹೇಳಿದ್ದಾರೆ.
ಅರುಣಾಚಲ ಪ್ರದೇಶ ಹೆಚ್ಚಾಗಿ ಸರ್ಕಾರ ಚಾಲಿತ ಆರ್ಥಿಕತೆ ಹೊಂದಿದೆ. ಹಾಗಾಗಿ ಎಲ್ಲ ಸಾಂಸ್ಥಿಕ ಹಾಗೂ ಸರ್ಕಾರಿ ವ್ಯವಹಾರಗಳು ಡಿಜಿಟಲ್ ಆದಲ್ಲಿ ರಾಜ್ಯದ ಆರ್ಥಿಕತೆಯ ಹೆಚ್ಚಿನ ಪಾಲು ಕ್ಯಾಶ್ಲೆಸ್ ಆಗಲಿದೆ. ಅರುಣಾಚಲ ಸರ್ಕಾರ ಈ ಗುರಿ ತಲುಪಲು ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಪ್ರಯತ್ನ ನಡೆಸಲಿದೆ. ರಾಜ್ಯದಲ್ಲಿ ಇನ್ನಷ್ಟು ಡಿಜಿಧನ್ ಮೇಳ ನಡೆಸುವ ಮೂಲಕ ಇದು ಯಶಸ್ಸು ಪಡೆಯಲೆಂದು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.