ದಾವೋಸ್: ಅಮೇರಿಕಾದ ಸ್ಥಾನದಲ್ಲಿ ನೂತನ ಜಾಗತಿಕ ಆರ್ಥಿಕತೆಯ ನಾಯಕವಾಗಿ ಹೊರಹೊಮ್ಮಲು ಚೀನಾ ಬಯಸುತ್ತಿದೆ. ಇಡೀ ವಿಶ್ವ ಹೆಚ್ಚಿನ ನಿರೀಕ್ಷೆಯೊಂದಿಗೆ ಭಾರತದತ್ತ ನೋಡುತ್ತಿದ್ದು, ಭಾರತ ಈ ಅವಕಾಶವನ್ನು ಪಡೆಯಲು ಉನ್ನತ ಮತ್ತು ವೇಗದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ದಾವೋಸ್ನ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಭಾಗವಿಸಿ ಮಾತನಾಡಿದ ಗಡ್ಕರಿ ಅವರು, ಭಾರತವೂ ವಿಶ್ವ ನಾಯಕನಾಗುವ ಹಾಗೂ ಜಾಗತಿಕ ಆರ್ಥಿಕ ಶಕ್ತಿಯಾಗುವ ಆಕಾಂಕ್ಷೆ ಹೊಂದಿದ್ದು, ಆಡಳಿತ, ನೀತಿ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಚೀನಾದಷ್ಟೇ ವೇಗವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ರಾಷ್ಟ್ರ. ಆದರೆ ಭಾರತಕ್ಕಿಂತ ಚೀನಾ ಗಾತ್ರದಲ್ಲಿ ಮುಂದಿದೆ. ಚೀನಾದ ಅನುಕೂಲ ಮತ್ತು ಅನಾನುಕೂಲವೆಂದರೆ ಅದು ಒಂದು ಕಮ್ಯೂನಿಷ್ಟ ರಾಷ್ಟ್ರ ಮತ್ತು ಅದು ಪ್ರಜಾಪ್ರಭುತ್ವ ಹೊಂದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.
ಭಾರತ ದೇಶ ಪ್ರಜಾಪ್ರಭುತ್ವವನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಭಿವೃದ್ಧಿ ಆಧಾರಿತ ಮತ್ತು ಬಂಡವಾಳ ಹೂಡಿಕೆ ಸ್ನೇಹಿ ಸರ್ಕಾರವಾಗಿದೆ. ಅದು ಫಾಸ್ಟ್ ಟ್ರ್ಯಾಕ್ ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆ ಹೊಂದಲು ಮತ್ತು ಭಷ್ಟ್ರಾಚಾರ ಮುಕ್ತ ದೇಶವನ್ನಾಗಿಸಲು ಬದ್ಧವಾಗಿದೆ. ಆದರೂ ನಿರ್ಧಾರ ಕೈಗೊಳ್ಳುವ ವೇಗದ ಮಟ್ಟದಲ್ಲಿ ಭಾರತ ಚೀನಾಗಿಂತ ಸ್ವಲ್ಪ ಹಿಂದಿದೆ. ಹಾಗಾಗಿ ಚೀನಾದ ಮಾದರಿಯಲ್ಲಿ ವೇಗದ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ ಎಂದು ಗಡ್ಕರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.