ನವದೆಹಲಿ: 2008 ರ ಬೀಜಿಂಗ್ ಒಲಂಪಿಕ್ನಲ್ಲಿ ರಜತ ಪದಕ ವಿಜೇತ ಕುಸ್ತಿಪಟು ಆಂಡ್ರಿ ಸ್ಟಾಡ್ನಿಕ್ ಅವರನ್ನು ಸೋಲಿಸುವ ಮೂಲಕ ಯೋಗ ಗುರು ಬಾಬಾ ರಾಮದೇವ್ ಅವರು ತಾವು ಕುಸ್ತಿಗೂ ಸೈ ಎಂದು ಪ್ರಚುರಪಡಿಸಿದರು.
ಪ್ರೊ. ರೆಸ್ಲಿಂಗ್ ಲೀಗ್ (PWL) ನ ಪ್ರಚಾರದ ಅಂಗವಾಗಿ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ 12-0 ಇಂದಾ ಸ್ಟಾಡ್ನಿಕ್ ಅವರನ್ನು ಸೋಲಿಸಿದರು. ಸ್ನೇಹಪೂರ್ವಕವಾಗಿ ಸ್ಟಾಡ್ನಿಕ್ ಸಹಕರಿಸಿದರು. ಗೆಲುವಿನ ನಂತರ ಭಾರತ್ ಮಾತಾಕಿ ಜೈ, ವಂದೇ ಮಾತರಂ ಎಂದು ಬಾಬಾ ರಾಮದೇವ್ ಜಯಘೋಷ ಹಾಕಿದರು. ಇದಕ್ಕೂ ಮುನ್ನ ಅವರು ಸೂರ್ಯ ನಮಸ್ಕಾರಗೈದರು.
ದೇಶಿ ಹಾಗೂ ವಿದೇಶಿ ಕುಸ್ತಿಪಟುಗಳಿಗೆ ಯೋಗದ ಶಕ್ತಿ ತೋರಿಸುವುದಾಗಿ ರಾಮದೇವ ಸವಾಲು ಹಾಕುತ್ತಲೇ ಬಂದವರು. 2016 ರಲ್ಲಿ ತಮ್ಮ ಆಶ್ರಮದಲ್ಲಿ ನಡೆದ 20ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ಗೂ ರಾಮದೇವ್ ಸವಾಲು ಹಾಕಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.