ನವದೆಹಲಿ: ಜಾರ್ಖಂಡ್ನಲ್ಲಿ ಭಾರತೀಯ ಕೃಷಿ ಸಂಶೋಧನಾ ಕೇಂದ್ರ (ಐಎಆರ್ಐ) ಸ್ಥಾಪಿಸುವ ಡಿಎಆರ್ಇ/ಐಸಿಎಆರ್ ಯೋಜನೆಯ 12ನೇ ಯೋಜನಾ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಇದು ಜಾರ್ಖಂಡ್ ಸರ್ಕಾರ ಗೌರಿಯಾ ಕರ್ಮಾದ ಹಜಾರಿಬಾಗ್ನಲ್ಲಿ ಒದಗಿಸಿರುವ 1000 ಎಕೆರೆ ಜಮೀನಿನ ಅಂದಾಜು 200.78 ಕೋಟಿ ರೂ. ಹೂಡಿಕೆಯ ಶೇ.100 ಐಸಿಎಆರ್ ಶೇರುಗಳನ್ನು ಹೊಂದಿದೆ.
ಈ ಸಂಸ್ಥೆ ದೆಹಲಿ ಸಂಸ್ಥೆ ಹೊಂದಿದ ಕೃಷಿ ಕ್ಷೇತ್ರದ ಎಲ್ಲ ವಿಭಾಗಗಳಾದ ಗದ್ದೆ ಕೃಷಿ, ತೋಟಗಾರಿಕಾ ಬೆಳೆಗಳು, ಅರಣ್ಯ ಕೃಷಿ, ಪಶುಸಂಗೋಪನೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಮತ್ತು ಲಕ್ಷ ಪಾಕನೆ, ಜೇನು ಉತ್ಪಾದನೆ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಒಳಗೊಂಡಿದೆ.
ಸಂಸ್ಥೆಯು ಶಿಕ್ಷಣ, ಸಂಶೋಧನೆ, ಮಾನವ ಸಂಪನ್ಮೂಲ ಗುಣಮಟ್ಟ ಅಭಿವೃದ್ಧಿ, ಉತ್ಪಾದನೆ, ಗುಣಮಟ್ಟ ಮತ್ತು ಲಾಭ ಹೆಚ್ಚಿಸಲು ರೈತ ಸ್ನೇಹಿ ತಂತ್ರಜ್ಞಾನ ಸೃಷ್ಟಿಸುವಲ್ಲಿ ಕಾರ್ಯ ನಿರ್ವಹಿಸಲಿದೆ.
ಇದೇ ವೇಳೆ ಭಾರತದ ಅಂತಾರಾಷ್ಟ್ರೀಯ ಲಸಿಕೆ ಕೇಂದ್ರ (ಐವಿಐ) ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಸಂಪುಟ ಅನುಮೋದನೆ ನೀಡಿದೆ.
ಇದರೊಂದಿಗೆ ದಕ್ಷಿಣ ಕೊರಿಯಾದ ಸಿಯೋಲ್ನ ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆಗೆ ವಾರ್ಷಿಕ 5 ಲಕ್ಷ ಯುಎಸ್ ಡಾಲರ್ ದಾನ ನೀಡುವ ಯೋಜನೆ ಹೊಂದಿದೆ.
ಅಮೇರಿಕಾದ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಯೋಜನೆಯಡಿ 1997ರಲ್ಲಿ ಈ ಸಂಸ್ಥೆ ಸ್ಥಾಪಿಸಲಾಗಿತ್ತು. ಜನರು, ವಿಶೇಷವಾಗಿ ಮಕ್ಕಳಿಗೆ ರೋಗ ತಡೆಗಟ್ಟಲು ವಿವಿಧ ಲಸಕೆಗಳನ್ನು ಅಭಿವೃದ್ಧಿಪಡಿಸಲು ಈ ಸಂಸ್ಥೆ ಆರಂಭಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.