ಬೆಂಗಳೂರು: ಸತೀಶ ನೀನಾಸಂ ಹಾಗೂ ಶೃತಿ ಹರಿಹರನ್ ಅಭಿನಯದ ’ಬ್ಯೂಟಿಫುಲ್ ಮನಸ್ಸುಗಳು’ ಚಿತ್ರ ಇದೇ ಜ.20 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಆದರೆ ಬಿಡುಗಡೆಗೆ ಚಿತ್ರಮಂದಿರಗಳೇ ಹೆಚ್ಚು ಸಿಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಭಾಷಾ ಚಿತ್ರಗಳ ಹಾವಳಿಯಿಂದ ಬೇಸರಗೊಂಡಿರುವ ಅವರು, ಈ ಕುರಿತು ತಮ್ಮ ಫೇಸ್ಬುಕ್ ವಾಲ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
20ನೇ ತಾರೀಖು ನಮ್ಮ ಸಿನಿಮಾ ಬಿಡುಗಡೆ. 2 ತೆಲಗು ಸಿನಿಮಾ ಕರ್ನಾಟಕದಲ್ಲಿರುವ ಅರ್ಧ ಚಿತ್ರಮಂದಿರಗಳನ್ನು ಖರೀದಿ ಮಾಡಿವೆ. 27 ಕ್ಕೆ ಎರಡು ಹಿಂದಿ ಸಿನೆಮಾ ಎಲ್ಲ ಮಲ್ಟಿಪ್ಲೆಕ್ಸ್ಗಳನ್ನು ಆಕ್ರಮಣ ಮಾಡುತ್ತೆ. ತಮಿಳು ಒಂದಷ್ಟು ಕಡೆ. ನಾವು ಒಂದೊಳ್ಳೆ ಸ್ವಮೇಕ್ ಸಿನಿಮಾ ಮಾಡಿ ಬಾಯಿ ಬಡಕೋತ ಇದೀವಿ. ನಮಗೆ ಥಿಯೇಟರ್ ಇಲ್ಲ. ಎಲ್ಲಿ ಬಿಡುಗಡೆ ಮಾಡ್ಬೇಕು? ಬಾಂಬೇನ, ಹೈದರಾಬಾದ, ಚೆನೈನಲ್ಲ ?
ಹೊಸಪೇಟೆನಲ್ಲಿ ಕಿರಿಕ್ ಪಾರ್ಟಿ ತೆಗೆದು ತೆಲಗು ಸಿನಿಮಾ ಹಾಕ್ತೀರಾ, ನಮ್ಮ ಬಾಯಿಗೆ ಮಣ್ಣು ಹಾಕಿ ಬೇರೆಯವರ ಬಾಯಿಗೆ ಅಮೃತ ಹಾಕಿ. ಯಾಕೆ ಯಾರು ಇಲ್ವ ಕೇಳೋರು ? ಅವರ ರಾಜ್ಯದಲ್ಲಿ ನಮ್ಮ ಸಿನಿಮಾನು ಹಾಕಿ. ನಮ್ದು ಒಳ್ಳೆ ಸಿನಿಮಾಗಳೇ. ಹೊಸ ನಿರ್ದೇಶಕರು, ಹೊಸ ನಟರು, ಹೊಸ ಪ್ರಯತ್ನ ಮಾಡಿ ಗೆದ್ದು ತೋರ್ಸಿದಾರೆ. ಕನ್ನಡದಲ್ಲಿ ಹೊಸ ಪ್ರಯತ್ನ ಆಗೋಲ್ಲ ಅಂತ ಇಷ್ಟ ದಿನ ಬೊಬ್ಬೆ ಹೊಡೆದವರೆಲ್ಲ ಎಲ್ಲಿದಿರಾ ? ಇಡೀ ಇಂಡಿಯಾದಲ್ಲಿ ನಮ್ಮಷ್ಟು ವಿಶಿಷ್ಟ ಪ್ರಯತ್ನ ಈಗ ಯಾರು ಮಾಡ್ತಿಲ್ಲ, ನಾವು ಮಾಡ್ತಾ ಇದೀವಿ. ತುಳಿರಿ ಎಲ್ಲ ಕಡೆ ಒಳ್ಳೆದು. ನಾವು ಭಿಕ್ಷುಕರು. ನಮ್ಮ ಜಾಗದಲ್ಲಿ ನಮ್ಮ ಥಿಯೇಟರ್ಗೆ ಭಿಕ್ಷೆ ಬೇಡಬೇಕು. ಭಿಕ್ಷುಕರು ನಾವು.
ಹೀಗೆ ನೀನಾಸಂ ಸತೀಶ್ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು, ಸಂಬಂಧಪಟ್ಟವರು ಸೂಕ್ತವಾಗಿ ಸ್ಪಂದಿಸಲೆಂದು ಆಶಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.