ನವದೆಹಲಿ: ಓಲಂಪಿಕ್ಸ್ ಪದಕ ಸಾಧನೆಗೈದ ಕುಸ್ತಿಪಟು ಯೋಗೇಶ್ವರ ದತ್ ವರದಕ್ಷಿಣೆಯನ್ನು ನಿರಾಕರಿಸಿ, ಮದುವೆ ಶಾಸ್ತ್ರಕ್ಕಾಗಿ ಕೇವಲ 1 ರೂಪಾಯಿ ಸ್ವೀಕರಿಸಿದ್ದು ಎಲ್ಲೆಡೆ ಸುದ್ದಿ ಮಾಡಿದೆ.
ಹರಿಯಾಣದ ಕಾಂಗ್ರೆಸ್ ನಾಯಕ ಜೈ ಭಗವಾನ್ ಶರ್ಮ ಅವರ ಪುತ್ರಿ ಶೀತಲ್ ಅವರೊಂದಿಗೆ ಸೋಮವಾರ ಹಸೆಮಣೆ ಏರಿರುವ ಅವರು, ಬಾಲ್ಯದ ದಿನಗಳ ಕಂಡ ಎರಡು ಕನಸುಗಳಲ್ಲಿ ಇದೂ ಒಂದು. ಕುಸ್ತಿ ನನ್ನ ಎರಡನೆಯ ಕನಸು ಎಂದು ಅವರು ತಿಳಿಸಿದ್ದಾರೆ.
ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಯೋಗೇಶ್ವರ ದತ್ ಅವರ ಗ್ರಾಮದ ಅಭಿವೃದ್ಧಿಗೆ 10ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದ್ದು ಮಹತ್ವದ ಬೆಳವಣಿಗೆ.
ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್, ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ಅಶೋಕ ತನ್ವರ್, ಕುಲದೀಪ್ ಶರ್ಮಾ ಮತ್ತು ಬಿಜೆಪಿ ನಾಯಕ ಮುರಳಿ ಮನೋಹರ ಜೋಶಿ ಆಗಮಿಸಿ ವಧು-ವರರಿಗೆ ಶುಭ ಕೋರಿದ್ದಾರೆ.
ಯೋಗೇಶ್ವರ್ ದತ್ ಅವರು 1 ರೂಪಾಯಿ ಸ್ವೀಕರಿಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಮೂಲತಃ ವರದಕ್ಷಿಣೆ ಎಂಬುದೇ ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗಿರುವಾಗ ನಿರಾಕರಣೆ ಅನಿವಾರ್ಯ ಎಂಬ ಅಂಶವೂ ಗಮನಾರ್ಹ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.