ಮೋದಿ ಸರ್ಕಾರದ ನೋಟು ಅಮಾನ್ಯೀಕರಣದ ಕುರಿತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಟೀಕಿಸುತ್ತಿದ್ದಂತೆ, ಮಾಜಿ ಆದಾಯ ತೆರಿಗೆ ಆಯುಕ್ತ ವಿಶ್ವಬಂಧು ಗುಪ್ತಾ ಅವರು 2011 ರಲ್ಲಿ ಮಾಜಿ ಪ್ರಧಾನಿ ಅವರ ಕಪ್ಪು ಮುಖ ಅನಾವರಣಗೊಳಿಸಿದ ವಿಡಿಯೊ ತುಣುಕೊಂದು ಇದೀಗ ವೈರಲ್ ಆಗಿದೆ.
ಮನಮೋಹನ್ ಸಿಂಗ್ ಅವರು ಮುಗ್ಧರು ಅಲ್ಲವೇ ಅಲ್ಲ. ಅವರಿಗೆ ಭ್ರಷ್ಟಾಚಾರ ಹೊಸ ವಿಷಯವೂ ಅಲ್ಲ. ಹರ್ಷದ್ ಮೆಹ್ತಾ ಪ್ರಕರಣದಿಂದಲೂ ಕೂಡಾ ಅವರು ಭ್ರಷ್ಟಾಚಾರಕ್ಕೆ ಬೆಂಬಲಿಸುತ್ತಲೇ ಇದ್ದು, ದೇಶದ ಆರ್ಥಿಕತೆ ಅಥವಾ ದೇಶದ ಕುರಿತು ಅವರು ಯಾವತ್ತೂ ಚಿಂತಿಸಿಲ್ಲ ಎಂದು ಗುಪ್ತಾ ಆರೋಪಿಸಿದ್ದಾರೆ.
ಹರ್ಷದ್ ಮೆಹ್ತಾ ಮೇಲೆ ಐಟಿ ದಾಳಿ ಮಾಡಿ 5000 ಕೋಟಿ ಹಣ ಜಪ್ತಿ ಮಾಡಿದಾಗ, ಕೇವಲ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು, ಐಟಿ ಇಲಾಖೆಗೆ 35 ಕ್ಕೂ ಹೆಚ್ಚು ಬಾರಿ ಕರೆ ಮಾಡಿ ಮೆಹ್ತಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದರಂತೆ.
ಅದೇ ರೀತಿ 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು, ಕಾಮನ್ವೆಲ್ತ್ ಹಗರಣಗಳು ಅವ್ಯಾಹತವಾಗಿ ನಡೆದಾಗಲೂ ಮೌನವಹಿಸಿದ್ದ ಮನಮೋಹನ ಸಿಂಗ್ ಅವರು, ಭ್ರಷ್ಟಾಚಾರವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ ಎನ್ನುತ್ತಾರೆ ವಿಶ್ವಬಂಧು ಗುಪ್ತಾ.
ಮನಮೋಹನ್ ಸಿಂಗ್ ಅವರ ಅವಧಿಯನ್ನು ಲಿಬಿಯಾದ ಗಡಾಫಿ ಸರ್ಕಾರಕ್ಕೆ ಹೋಲಿಸಿರುವ ವಿಶ್ವಬಂಧು ಗುಪ್ತಾ, ಹಿಂದೆಂದೂ ನಡೆಯದಷ್ಟು ದೇಶದ್ರೋಹ ಈ ಸಂದರ್ಭದಲ್ಲಿ ನಡೆದಿದೆ. ಭ್ರಷ್ಟಾಚಾರ ಹಾಗೂ ದೇಶವನ್ನು ಕೊಳ್ಳೆ ಹೊಡೆಯುವವರಿಗೆ ಬೆಂಬಲ ನೀಡುವಲ್ಲಿ ಮನಮೋಹನ್ ಸಿಂಗ್ ಮೊದಲಿಗರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಕೇವಲ ಆರೋಪಿಸಿ ಬಿಡದ ಗುಪ್ತಾ ಅವರು, ಕಳೆದ ದಶಕಗಳಲ್ಲಾದ ಹಗರಣ ಹಾಗೂ ಅವನ್ನು ತಡೆಯಲು ಹೇಗೆ ಪ್ರಯತ್ನಿಸಿದರು ಎಂಬ ಕುರಿತು ಬೇಕಿದ್ದರೆ ಮನಮೋಹನ್ ಸಿಂಗ್ ಅವರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.