ಭೋಪಾಲ್: ಯೋಗಗುರು ಬಾಬಾ ರಾಮ್ದೇವ್ ಅವರ ವಿವಾದಿತ ಬಂಜೆತನ ನಿವಾರಕ ‘ದಿವ್ಯ ಪುತ್ರಜೀವಕ್ ಬೀಜ’ ಔಷಧಿಗೆ ಮಧ್ಯಪ್ರದೇಶ ಸರ್ಕಾರ ನಿಷೇಧ ಹೇರಿದೆ.
ಈ ಔಷಧಿಯ ಹೆಸರನ್ನು ಬದಲಾಯಿಸಿದರೆ ಮಾತ್ರ ಇದರ ಮಾರಾಟಕ್ಕೆ ಅವಕಾಶ ನೀಡುವುದಾಗಿ ಪತಂಜಲಿ ಯೋಗಪೀಠಕ್ಕೆ ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ ಎನ್ನಲಾಗಿದೆ.
ಈ ಔಷಧಿಯ ವಿಷಯವಾಗಿ ರಾಜ್ಯಸಭೆಯಲ್ಲಿ ಕಳೆದ ವಾರ ದೊಡ್ಡ ರಂಪಾಟವೇ ನಡೆದಿತ್ತು, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಈ ಔಷಧಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು.
ಪುತ್ರ ಸಂತಾನಕ್ಕಾಗಿ ಈ ಔಷಧಿಯನ್ನು ಕೊಡಲಾಗುತ್ತದೆ ಎಂಬ ಆರೋಪವಿದೆ. ಆದರೆ ಪತಂಜಲಿ ಪೀಠ ಇದನ್ನು ನಿರಾಕರಿಸಿದೆ. ಅಲ್ಲದೇ ಈ ಬಗ್ಗೆ ಔಷಧಿಯ ಲೇಬಲ್ನಲ್ಲಿ ಹೇಳಿಕೆಯನ್ನೂ ಪ್ರಕಟಿಸುವುದಾಗಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.