ಬೆಂಗಳೂರು: ಪಿಐಓ(ಪೀಪಲ್ ಆಫ್ ಇಂಡಿಯನ್ ಓರಿಜಿನ್) ಕಾರ್ಡ್ನಿಂದ ಓಸಿಐ (ಓವರ್ಸೀಸ್ ಇಂಡಿಯನ್ ಸಿಟಿಜನ್ಸ್) ಕಾರ್ಡ್ಗೆ ಬದಲಾಯಿಸಿಕೊಳ್ಳಲು 2017 ಜೂನ್ 30 ರವರೆಗೂ ಅವಧಿ ವಿಸ್ತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಜರುಗಿದ 14 ನೇ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಗದಿತ ಅವಧಿಯಲ್ಲಿ ಬದಲಾಯಿಸಿಕೊಂಡರೆ ಯಾವುದೇ ರೀತಿಯ ದಂಡ ಭರಿಸಬೇಕಿಲ್ಲ ಎಂದು ತಿಳಿಸಿದ್ದಾರೆ.
ಕಾರ್ಡ್ ಬದಲಾವಣೆಗೆ ಈ ಮೊದಲು ಡಿ. 30 ಕೊನೆಯ ದಿನವಾಗಿತ್ತು. ಓಸಿಐ ಕಾರ್ಡ್ ಜಾಗತಿಕ ವಲಸೆ, ಸಾಧನೆಗಳು ಹಾಗೂ ವಲಸಿಗರ ಆಕಾಂಕ್ಷೆಗಳ ಸಂಕೇತವಾಗಿದೆ ಎಂದಿರುವ ಮೋದಿ ಅವರು, ಕಾರ್ಡ್ ಬದಲಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ದೆಹಲಿಯಲ್ಲಿ ವಿಶೇಷ ಕೌಂಟರ್ಗಳನ್ನು ತೆರೆಯಲಾಗುವುದು ಎಂದರು.
ಮಾರಿಷಸ್ನಲ್ಲಿರುವ ಗಿರ್ಮಿತಿಯಾಸ ವಂಶಸ್ಥರ ಓಸಿಐ ಕಾರ್ಡ್ಗೆ ಅರ್ಹತೆಯ ಕುರಿತು ಅವಶ್ಯಕ ಪ್ರಕ್ರಿಯೆಗಳು ಆರಂಭವಾಗಿದ್ದು, ಅದೇ ರೀತಿ ಪಿಐಓ ಸಮಸ್ಯೆಗಳಿರುವ ಫಿಜಿ, ಐಲ್ಯಾಂಡ್, ಸುರೈನೇಮ್, ಗುಯಾನ್ ಮತ್ತು ಕೆರೆಬಿಯನ್ ಕುರಿತೂ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.