ಭೋಪಾಲ್: ಛತ್ತೀಸ್ಗಢ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಚಂಡೀಗಢ ಪುರಸಭಾ ಚುನಾವಣೆಗಳಲ್ಲಿ ಈಗಾಗಲೇ ತನ್ನ ಜಯವನ್ನು ಖಚಿತಪಡಿಸಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಧ್ಯಪ್ರದೇಶ ಸ್ಥಳೀಯ ಪೌರ ಚುನಾವಣೆಯಲ್ಲೂ ಗೆಲುವು ಸಾಧಿಸಿದೆ.
ಬಿಜೆಪಿ ಒಟ್ಟು 35 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ 4 ಸ್ಥಾನಗಳನ್ನು ಗೆದ್ದುಕೊಂಡಿದೆ. ಸ್ವತಂತ್ರ ಪಕ್ಷ ಉಳಿದ ಒಂದು ಸ್ಥಾನವನ್ನು ಗೆದ್ದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ಬಳಿಕ ನಡೆದ ಈ ಎಲ್ಲ ಪುರಸಭಾ ಚುನಾವಣೆಗಳಲ್ಲಿ ಬಿಜೆಪಿ ಜಯಶಾಲಿಯಾಗಿದ್ದು, ಇತ್ತೀಚೆಗೆ ಗುಜರಾತ್ನ ಪೌರ ಚುನಾವಣೆಯಲ್ಲೂ 123 ಸ್ಥಾನಗಳಲ್ಲಿ 107 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಸೂರತ್ನ ಕನಕಪುರ-ಕಾನ್ಸಡ್ ಪೌರಚುನಾವಣೆಯಲ್ಲಿ ಬಿಜೆಪಿ 28ರಲ್ಲಿ 27 ಸ್ಥಾನಗಳನ್ನು ತನ್ನದಾಗಿಸಿದರೆ, ರಾಜ್ಕೋಟ್ನ ಗೊಂಡಾಲ್ ತಾಲೂಕು ಪಂಚಾಯತ್ ಚುನಾವಣೆಯಲ್ಲಿ 22 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಛತ್ತೀಸ್ಗಢದ ಭಿಲೈ-ಚರೋದಾ, ಸಾರಂಗಢ ಪುರಸಭಾ ಚುನಾವಣೆಗಳ ಗೆಲುವು ಬಿಜೆಪಿಯ ಬಲ ಹೆಚ್ಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.